RECIPE| ಬಾಯಿ ಚಪ್ಪರಿ‌ಸುವ ಕ್ಯಾರೆಟ್ ಪಾಯಸ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಗಟ್ಟಿ ಹಾಲು
ಕ್ಯಾರೆಟ್
ಗೋಡಂಬಿ
ಬಾದಾಮಿ
ಏಲಕ್ಕಿ ಪುಡಿ
ತುಪ್ಪ
ಕೇಸರಿ (ಬೇಕಿದ್ದರೆ)

ಮಾಡುವ ವಿಧಾನ:

* ಹಾಲು ಚೆನ್ನಾಗಿ ಕುದಿ ಬಂದು ಸ್ವಲ್ಪ ಗಟ್ಟಿಯಾಗುವವರೆಗೆ ಕುದಿಸಿ.
* ನಂತರ ಬೇರೆ ಪಾತ್ರೆಗೆ ತುಪ್ಪ ಹಾಕಿ ಅದರಲ್ಲಿ ಗೋಡಂಬಿಯನ್ನು ಹಾಕಿ ಫ್ರೈ ಮಾಡಿ ಒಂದು ಬದಿಯಲ್ಲಿಡಿ.
* ನಂತರ ಅದೇ ಪಾತ್ರೆಗೆ ತುರಿದ ಕ್ಯಾರೆಟ್ ಹಾಕಿ ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ನಂತರ ಬಾದಾಮಿಯ ಸಿಪ್ಪೆ ಸುಲಿದು ಅದನ್ನು ಕ್ಯಾರೆಟ್ ಜೊತೆ ಹಾಕಿ ಕುದಿಸಿ.
* ಅದಕ್ಕೆ ಮಂದ ಹಾಲನ್ನು ಬೆರೆಸಿ ಕುದಿಸಿ. ನಂತರ ತಣ್ಣಗಾಗಲು ಇಡಿ.
* ಈಗ ಕ್ಯಾರೆಟ್ ಮತ್ತು ಬಾದಾಮಿ ಮಿಶ್ರಣವನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿ.
* ಈಗ ಪುನಃ ಹಾಲನ್ನು ಕುದಿಯಲು ಇಟ್ಟು, ಅದಕ್ಕೆ ಸಕ್ಕರೆಯನ್ನು ಹಾಕಿ. ರುಬ್ಬಿದ ಕ್ಯಾರೆಟ್ ಹಾಕಿ ಸೌಟ್ ನಿಂದ ಮಿಕ್ಸ್ ಮಾಡಿ ಕುದಿಸಬೇಕು.
* ನಂತರ ಏಲಕ್ಕಿ ಹಾಕಿ ಮಿಕ್ಸ್ ಮಾಡಿ ಉರಿಯಿಂದ ಇಳಿಸಿ. ಅದನ್ನು ಗೋಡಂಬಿ ಮತ್ತು ಕೇಸರಿಯಿಂದ ಅಲಂಕರಿಸಿದರೆ ಕ್ಯಾರೆಟ್ ಪಾಯಸ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!