RECIPE| ಮಣ್ಣಿನ ಮಡಕೆಯಲ್ಲಿ ಸಿದ್ಧಪಡಿಸಿದ ಪನ್ನೀರ್ ಗ್ರೇವಿ, ರುಚಿಯೂ ಅದ್ಭುತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಣ್ಣಿನ ಮಡಕೆಯಲ್ಲಿ ಸಿದ್ಧಪಡಿಸಿದಂತಹ ಪನ್ನೀರ್‌ ಗ್ರೇವಿ ಎಂದಾದ್ರೂ ತಿಂದಿದ್ದೀರಾ ? ಇಲ್ಲಾ ಅಂತಾದ್ರೆ ಒಮ್ಮೆ ಟ್ರೈ ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:

ಪನ್ನೀರ್
ಮೊಸರು
ಈರುಳ್ಳಿ
ಟೊಮೆಟೊ
ಹಸಿ ಮೆಣಸಿನಕಾಯಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಅರಿಶಿಣ ಪುಡಿ
ಕೊತ್ತಂಬರಿ ಪುಡಿ
ಕರಿ ಮೆಣಸಿನ ಪುಡಿ
ಗರಂ ಮಸಾಲ
ಖಾರದ ಪುಡಿ
ಕರಿ ಬೇವಿನ ಎಲೆ
ಉಪ್ಪು
ಎಣ್ಣೆ
ನೀರು
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ:

* ಮೊದಲು ಮಣ್ಣಿನ ಮಡಿಕೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ 2-3 ನಿಮಿಷ ಫ್ರೈ ಮಾಡಿ. ತದನಂತರ ಪನ್ನಿರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.
* ಮಡಕೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಅದಕ್ಕೆ ಕರಿಬೇವಿನ ಎಲೆ, ಈರುಳ್ಳಿ ಹಾಕಿ ಹುರಿಯಿರಿ, ನಂತರ ಹಸಿ ಮೆಣಸಿನ ಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಅದಕ್ಕೆ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ ಸೇರಿಸಿ.
* ನಂತರ ಅದಕ್ಕೆ ಚೆನ್ನಾಗಿ ಕದಡಿದ ಮೊಸರು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ಸ್ವಲ್ಪ ನೀರು ಹಾಕಿ ಗ್ರೇವಿಯನ್ನು ಕುದಿಸಿ.
* ಈಗ ಫ್ರೈ ಮಾಡಿದ ಪನ್ನೀರ್ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಗ್ರೇವಿ ರೆಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!