RECIPE| ವಿಭಿನ್ನ ರೀತಿಯ ತಿನಿಸು, ಮಾಡಿ ನೋಡಿ ಮೊಟ್ಟೆ ಶಾವಿಗೆ ಬಾತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಗ್ರಿಗಳು:

ಮೊಟ್ಟೆ
ಶಾವಿಗೆ
ಈರುಳ್ಳಿ
ಸಾಸಿವೆ
ಕಡಲೆಬೇಳೆ
ಕರಿಬೇವು
ಬೆಣ್ಣೆ
ಧನಿಯ
ಜೀರಿಗೆ
ಕೆಂಪು ಮೆಣಸಿನಕಾಯಿ
ದಾಲ್ಚಿನ್ನಿ
ಏಲಕ್ಕಿ
ಎಣ್ಣೆ
ತುಪ್ಪ
ನೀರು
ಉಪ್ಪು

ಮಾಡುವ ವಿಧಾನ:

* ಧನಿಯ, ಜೀರಿಗೆ, ಕೆಂಪು ಮೆಣಸಿನಕಾಯಿ, ಏಲಕ್ಕಿ, ದಾಲ್ಚಿನ್ನಿ ಇವೆಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ.
* ಒಂದು ಬಾಣಲೆ ಬಿಸಿಮಾಡಿ ಅದಕ್ಕೆ ತುಪ್ಪ ಹಾಕಿ ಶಾವಿಗೆಯನ್ನು ಸಣ್ಣ ಉರಿಯಲ್ಲಿ ಹುರಿಯಿರಿ.
* ಸಾಸಿವೆ, ಕಡಲೆ, ಉಪ್ಪು, ಕರಿಬೇವು, ಮೊಟ್ಟೆಯ ಹಳದಿ ಭಾಗ ಮತ್ತು ಸಿದ್ಧಮಾಡಿಟ್ಟುಕೊಂಡ ಪುಡಿಯನ್ನು ಸೇರಿಸಿ. ಇವೆಲ್ಲವನ್ನು ಚೆನ್ನಾಗಿ ಕಲಸಿ. ಮೊಟ್ಟೆ ಇವೆಲ್ಲದರೊಂದಿಗೆ ಬೆರೆಯುವವರೆಗೆ ಇದನ್ನು ಕಲಸಿ.
* ಸ್ವಲ್ಪ ಹೊತ್ತಿನ ನಂತರ ಸ್ವಲ್ಪ ನೀರು ಸೇರಿಸಿ. ನೀರು ಕುದಿಯಲು ಆರಂಭಿಸಿದಾಗ ಹುರಿದ ಶಾವಿಗೆಯನ್ನು ಇದಕ್ಕೆ ಸೇರಿಸಿ.
* ನೀರು ಪೂರ್ತಿ ಆವಿಯಾಗುವವರೆಗೆ ಈ ಮಿಶ್ರಣವನ್ನು ಬೇಯಿಸಿ. ಮೊಟ್ಟೆ ಶಾವಿಗೆ ಬಾತನ್ನು ಬಿಸಿ ಬಿಸಿಯಾಗಿ ತಿಂದು ನೋಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!