ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಪ್ರಥಮ್ ಮಿಲಿಟರಿ ಬಟ್ಟೆ ತೊಟ್ಟು ಬಿಗ್ಬಾಸ್ ಮನೆಗೆ ಎಂಟ್ರಿ ನೀಡಿದ್ದಾರೆ. ಪ್ರಥಮ್ ವಿಚಿತ್ರ ಆದ್ರೂ ರೈಟ್ ಅಂದುಕೊಳ್ತಿದ್ದಂತೆಯೇ ಪ್ರಥಮ್ ಬಿಗ್ ಬಾಸ್ ಟ್ರೋಫಿ ಕೂಡ ಗೆದ್ದಿದ್ರು, ಇದಿಗ ಲಾರ್ಡ್ ಪ್ರಥಮ್ ಆಗಿ ದೊಡ್ಮನೆಗೆ ಎಂಟ್ರಿ ನೀಡಿದ್ದಾರೆ.
ಇಂದಿನ ಬಿಗ್ಬಾಸ್ ಪ್ರೊಮೊ ಔಟ್ ಆಗಿದ್ದು, ಪ್ರಥಮ್ ಮಿಲಿಟರಿ ಔಟ್ಫಿಟ್ನಲ್ಲಿರುವ ಡ್ಯಾನ್ಸರ್ಸ್ ಜೊತೆ ಎಂಟ್ರಿ ಕೊಟ್ಟಿದ್ದು, ಇಂದಿನ ಎಪಿಸೋಡ್ ನೋಡೋಕೆ ಜನ ಉತ್ಸುಕರಾಗಿದ್ದಾರೆ.
ಈಗಾಗಲೇ ಶಾಸಕ ಪ್ರದೀಪ್ ಈಶ್ವರ್ ಮೊದಲ ಅತಿಥಿಯಾಗಿ ಮನೆಗೆ ಬಂದು ಹೋಗಿದ್ದಾರೆ, ಈಗ ಪ್ರಥಮ್ ಬರ್ತಿದ್ದಾರೆ, ಹೀಗೆ ಬರೀ ಗೆಸ್ಟ್ಗಳೇ ಬರ್ತಿದ್ರೆ ಆಟಕ್ಕೆ ತೊಂದರೆ ಅನ್ನೋದು ನೆಟ್ಟಿಗರ ಅಭಿಪ್ರಾಯ