RECIPE| ಸೋಡಾ ಕುಡಿಯುವ ಅಭ್ಯಾಸ ಇದ್ರೆ ಒಮ್ಮೆ ಟ್ರೈ ಮಾಡಿ ದ್ರಾಕ್ಷಿ ಸೋಡಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಅನೇಕ ಮಂದಿ ಊಟ ಆದಮೇಲೆ ಸರಿಯಾಗಿ ಜೀರ್ಣವಾಗಲಿ ಅಥವಾ ಬಿಸಿಲಿನ ತಾಪಕ್ಕೆ ದೇಹ ತಂಪಾಗಲಿ ಎನ್ನುವ ಕಾರಣಕ್ಕೆ ಸೋಡಾ ಕುಡಿಯುತ್ತಾರೆ. ಹಾಗೆಯೇ ನಿಮಗೂ ಈ
ಸೋಡಾ ಕುಡಿಯುವ ಅಭ್ಯಾಸ ಇದ್ರೆ, ಒಮ್ಮೆ ಟ್ರೈ ಮಾಡಿ ನೋಡಿ ದ್ರಾಕ್ಷಿ ಸೋಡಾ. ಇದನ್ನು ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನವನ್ನು ಇಲ್ಲಿ ತಿಳಿಯಿರಿ.

ಬೇಕಾದ ಪದಾರ್ಥಗಳು:

ಸಕ್ಕರೆ
ನೀರು
ಕಪ್ಪು ದ್ರಾಕ್ಷಿ
ಕಪ್ಪು ಉಪ್ಪು
ನಿಂಬೆ ರಸ
ಜೀರಿಗೆ ಪುಡಿ
ಐಸ್
ಸೋಡಾ ನೀರು

ಮಾಡುವ ವಿಧಾನ:

* ಮೊದಲು ಒಂದು ಪಾತ್ರೆಯಲ್ಲಿ ನೀರು ಮತ್ತು ಸಕ್ಕರೆಯನ್ನು ಹಾಕಿ ಕುದಿಸಿ.

* ಸಕ್ಕರೆ ನೀರಿನಲ್ಲಿ ಕರಗಿದ ನಂತರ ತಣ್ಣಗಾಗಲು ಬಿಡಿ.

* ಈಗ ಕಪ್ಪು ದ್ರಾಕ್ಷಿಯನ್ನು ಮಿಕ್ಸರ್ ನಲ್ಲಿ ಹಾಕಿ ರುಬ್ಬಿ, ಫಿಲ್ಟರ್ ಮಾಡಿ.

* ಈಗ ಒಂದು ಲೋಟದಲ್ಲಿ ಸಕ್ಕರೆ ಪಾಕ, ಕಪ್ಪು ಉಪ್ಪು, ನಿಂಬೆ ರಸ, ಜೀರಿಗೆ ಪುಡಿ, ಐಸ್ ಕ್ಯೂಬ್ಸ್ ಮತ್ತು ಸೋಡಾ ನೀರನ್ನು ಸೇರಿಸಿ ಕುಡಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!