Sunday, October 1, 2023

Latest Posts

ದುಲ್ಕರ್ ಸಲ್ಮಾನ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ರಾಜ್ ಬಿ. ಶೆಟ್ಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ರಾಜ್ ಬಿ. ಶೆಟ್ಟಿ ಮಲಯಾಳಂನಲ್ಲಿ ಸಿನಿಮಾವೊಂದರಲ್ಲಿ ನಟಿಸ್ತಿದ್ದಾರೆ. ಇದರ ಜೊತೆಗೇ ಅಚ್ಚರಿ ವಿಷಯವೊಂದು ಹೊರಬಿದ್ದಿದ್ದು, ದುಲ್ಕರ್ ಸಲ್ಮಾನ್ ನಟನೆಯ ಸಿನಿಮಾಗೆ ರಾಜ್ ಬಿ. ಶೆಟ್ಟಿ ಆಕ್ಷನ್ ಕಟ್ ಹೇಳಲಿದ್ದಾರೆ.

ಮಲಯಾಳಂ ಸಿನಿಮಾ ಕಡೆ ರಾಜ್ ಒಲವು ತೋರಿದ್ದು, ಒಳ್ಳೊಳ್ಳೆ ಆಯ್ಕೆಗಳು ಅವರ ಮುಂದಿದೆ. ದುಲ್ಕರ್ ಸಲ್ಮಾನ್ ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಹೊರಬರುತ್ತಿದೆ. ರಾಜ್ ನಿರ್ದೇಶನದಲ್ಲಿ ಕೆಲಸ ಮಾಡೋದಕ್ಕೆ ಉತ್ಸುಕನಾಗಿದ್ದೇನೆ ಎಂದು ಸಲ್ಮಾನ್ ಹೇಳಿಕೊಂಡಿದ್ದಾರೆ. ಒಟ್ಟಾರೆ ಈ ಸುದ್ದಿ ಕನ್ನಡ ಹಾಗೂ ಮಲಯಾಳಂ ಸಿನಿ ಅಭಿಮಾನಿಗಳಿಗೆ ಸಿಹಿ ಸುದ್ದಿಯಾಗಿರೋದಂತೂ ಹೌದು!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!