FOOD| ನೆನಸಿಟ್ಟ ಕಾಳು ತಿನ್ನೋಕೆ ಇಷ್ಟ ಆಗಲ್ಲ ಅಂತಾದ್ರೆ ಟ್ರೈ ಮಾಡಿ ಹೆಸರುಕಾಳು ದೋಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಸಿ ತರಕಾರಿ, ಕಾಳುಗಳನ್ನು ತಿನ್ನುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಆದರೆ ಹಸಿ ತರಕಾರಿ, ಕಾಳುಗಳನ್ನು ತಿನ್ನೋದು ಹೇಗೆ? ಅದರಲ್ಲಿ ಉಪ್ಪು ಕಾರ ಇರೋದಿಲ್ವಲ್ಲಾ ಅಂತ ಯೋಚನೆಯಾಗುತ್ತೆ. ಆದರೆ ದೇಹದ ಆರೋಗ್ಯಕ್ಕೆ ಹಸಿ ತರಕಾರಿ, ಕಾಳುಗಳು ಮುಖ್ಯ. ಹಸಿ ಕಾಳುಗಳನ್ನು ತಿನ್ನಲು ಆಗಲ್ಲ ಅಂತಾದ್ರೆ ಒಮ್ಮೆ ಟ್ರೈ ಮಾಡಿ ಹೆಸರುಕಾಳಿನ ದೋಸೆ.

ಬೇಕಾಗುವ ಸಾಮಾಗ್ರಿಗಳು:

*ಹೆಸರು ಕಾಳು
*ಶುಂಠಿ
*ಜೀರಿಗೆ
*ಉಪ್ಪು
*ಹಸಿಮೆಣಸಿನಕಾಯಿ
*ಕೊತ್ತಂಬರಿ ಸೊಪ್ಪು
*ಎಣ್ಣೆ

ಮಾಡುವ ವಿಧಾನ:

* ಮೊದಲು ಹೆಸರು ಕಾಳನ್ನು ನೀರಿನಲ್ಲಿ ಸುಮಾರು ಐದು ಗಂಟೆಗಳ ಕಾಲ ನೆನೆಸಿಡಿ.
* ಬಳಿಕ ನೀರಿನಿಂದ ಕಾಳನ್ನು ತೆಗೆದು ಬಸಿದಿಡಿ.
* ಈಗ ಹೆಸರು ಕಾಳಿನ ಜೊತೆಗೆ ಸಣ್ಣಗೆ ಹೆಚ್ಚಿದ ಹಸಿಮೆಣಸು, ಶುಂಠಿ, ಜೀರಿಗೆಯನ್ನು ಸೇರಿಸಿ ಚೆನ್ನಾಗಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
* ರುಬ್ಬಿದ ದೋಸೆ ಹಿಟ್ಟಿಗೆ ಉಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ.
* ಒಲೆ ಮೇಲೆ ತವಾ ಬಿಸಿ ಮಾಡಲು ಇಡಿ, ನಂತರ ಹಿಟ್ಟನ್ನು ದೋಸೆಯಾಕಾರದಲ್ಲಿ ಹಾಕಿ ಬೇಯಿಸಿ. ಈಗ ರುಚಿಯಾದ ಮತ್ತು ಆರೋಗ್ಯಕರ
ಹೆಸರುಕಾಳಿನ ದೋಸೆ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!