VIRAL VIDEO | ಯಾವಾಗ್ಲೂ ಅಮ್ಮನೇ ಮಕ್ಕಳ ಫೇವರೆಟ್, ಇಲ್ಲ ಅನ್ನೋರು ವಿಡಿಯೋ ನೋಡಿ ನಿರ್ಧಾರ ಮಾಡಿ..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕ್ಯೂಟ್ ವಿಡಿಯೋಗಳು ಸದಾ ವೈರಲ್ ಆಗುತ್ತವೆ. ಅಂಥದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಮಗುವಿಗೆ ಅಪ್ಪ ಇಷ್ಟವೋ ಅಮ್ಮ ಇಷ್ಟವೋ ಎನ್ನೋದನ್ನು ವಿಡಿಯೋ ನೋಡಿ ತಿಳಿಯಬಹುದು.

ತಂದೆ-ತಾಯಿ ಆಟ ಆಡುತ್ತಿರುತ್ತಾರೆ, ಗೆದ್ದವರು ಸೋತವರ ತಲೆ ಮೇಲೆ ಖಾಲಿ ಬಾಟಲಿಯಿಂದ ಹೊಡೆಯಬೇಕು, ಎರಡು ಬಾರಿ ತಂದೆ ಸೋತಿದ್ದು, ತಾಯಿ ಬಾಟಲ್‌ನಲ್ಲಿ ತಂದೆ ತಲೆಗೆ ಹೊಡೆಯುತ್ತಾರೆ. ಮಗು ಸುಮ್ಮನೆ ಇರುತ್ತದೆ.

ಆದರೆ ತಾಯಿ ಒಮ್ಮೆ ಸೋತಿದ್ದು, ತಂದೆ ಬಾಟಲಿಯಿಂದ ತಾಯಿ ತಲೆಗೆ ಹೊಡೆದಾಗ ಮಗು ತನಗೇ ಹೊಡೆದಷ್ಟು ನೋವು ಅನುಭವಿಸಿ ಜೋರಾಗಿ ಅಳುತ್ತದೆ. ಮಗುವಿನ ಮುದ್ದಾದ ರಿಯಾಕ್ಷನ್‌ಗೆ ಮನಸೋಲದವರಿಲ್ಲ. ಎಷ್ಟೇ ಆಗಲಿ ಮಕ್ಕಳಿಗೆ ಅಮ್ಮ ಅಂದ್ರೆ ಒಂಚೂರು ಪ್ರೀತಿ ಜಾಸ್ತಿನೇ ಅಲ್ವಾ?

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!