RECIPE| ಹಲಸಿನ ಹಣ್ಣಿನ ಬೋಂಡಾ ಎಂದಾದರೂ ತಿಂದಿದ್ದೀರಾ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಹಲಸಿನ ಹಣ್ಣಿನಿಂದ ಮಾಡಲಾಗುವ ವಿವಿಧ ಖಾದ್ಯಗಳನ್ನು ನೀವು ಸವಿದಿರುತ್ತೀರಿ, ಆದರೆ ಹಲಸಿನ ಹಣ್ಣಿನ ಬೋಂಡಾ ಎಂದಾದರು ತಿಂದಿದ್ದೀರಾ? ಹಾಗಾದ್ರೆ ಒಮ್ಮೆ ಮಾಡಿ ನೋಡಿ.

ಬೇಕಾಗುವ ಪದಾರ್ಥಗಳು:

ದೋಸೆ ಅಕ್ಕಿ(ರೇಷನ್ ಅಕ್ಕಿ)
ಹಲಸಿನ ಹಣ್ಣು
ತೆಂಗಿನ ತುರಿ
ಏಲಕ್ಕಿ
ಬೆಲ್ಲ
ಉಪ್ಪು
ಎಣ್ಣೆ

ಮಾಡುವ ವಿಧಾನ:

  • ಮೊದಲಿಗೆ ಅಕ್ಕಿಯನ್ನು 2 ಗಂಟೆಗಳ ಕಾಲ ನೆನೆಸಿಡಬೇಕು.
  • ಬಳಿಕ ಹಲಸಿನ ಹಣ್ಣು, ನೆನೆಸಿದ ಅಕ್ಕಿ, ತೆಂಗಿನತುರಿ, ಏಲಕ್ಕಿ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಸಿಹಿ ಬೇಕಾದಲ್ಲಿ ಬೆಲ್ಲ ಸೇರಿಸಿಕೊಳ್ಳಿ. ಎಲ್ಲದನ್ನು ಒಟ್ಟಿಗೆ ರುಬ್ಬಿಕೊಳ್ಳಬೇಕು. ರುಬ್ಬಿರುವಂತಹ ಮಿಶ್ರಣಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಬೇಕು.
  • ಕಾದ ಎಣ್ಣೆಯಲ್ಲಿ ಬೋಂಡಾ ಹಿಟ್ಟನ್ನು ಹಾಕಿ ಕರಿಯಬೇಕು. ಮಧ್ಯಮ ಉರಿಯಲ್ಲಿ ಬೋಂಡಾ ಕರಿದರೆ ರುಚಿಕರವಾದ ಹಲಸಿನ ಹಣ್ಣಿನ ಬೋಂಡಾ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!