RECIPE| ಮತ್ತೆ ಮತ್ತೆ ತಿನ್ನಬೇಕೆನ್ನಿಸುವ ಕಡಾಯಿ ಅಣಬೆ ಗ್ರೇವಿ ಒಮ್ಮೆ ಟ್ರೈ ಮಾಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

* ಅಣಬೆ
* ಕ್ಯಾಪ್ಸಿಕಂ
* ಈರುಳ್ಳಿ
* ಟೊಮೆಟೊ
* ಶುಂಠಿ
* ಬೆಳ್ಳುಳ್ಳಿ ಎಸಳು
* ಹಸಿ ಮೆಣಸಿನ ಕಾಯಿ
* ಉಪ್ಪು
* ಕೆಂಪು ಮೆಣಸಿನ ಪುಡಿ
* ಕೊತ್ತಂಬರಿ ಪುಡಿ
* ಅರಿಶಿನ ಪುಡಿ
* ಗರಂ ಮಸಾಲ
* ತುಪ್ಪ

ಮಾಡುವ ವಿಧಾನ:

* ಮೊದಲು ಅಣಬೆಯನ್ನು ಶುಚಿಗೊಳಿಸಿ, ಕತ್ತರಿಸಿ ಚೆನ್ನಾಗಿ ತೊಳೆಯಬೇಕು.
* ಈಗ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿಯನ್ನು ಪೇಸ್ಟ್ ಮಾಡಿಕೊಳ್ಳಿ.
* ನಂತರ ಬಾಣಲೆಯನ್ನು ಬಿಸಿ ಮಾಡಿ ತುಪ್ಪ, ಈರುಳ್ಳಿ ಹಾಕಿ ಹುರಿಯಬೇಕು. ಅದಕ್ಕೆ ಹಸಿ ಮೆಣಸಿನ ಕಾಯಿ, ಬೆಳ್ಳುಳ್ಳಿ, ಶುಂಠಿ ಹಾಕಿ ತಯಾರಿಸಿದ ಪೇಸ್ಟ್ ಹಾಕಿ 1-2 ನಿಮಿಷ ಬಿಸಿ ಮಾಡಬೇಕು.
* ಈಗ ಟೊಮೆಟೊ, ಉಪ್ಪು, ಕೆಂಪು ಮೆಣಸಿನ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ ಹಾಕಿ ಮಿಶ್ರ ಮಾಡಬೇಕು. ನಂತರ ಅಣಬೆ, ನೀರು ಹಾಕಬೇಕು.
* ನಂತರ ಅಣಬೆ ಬೇಯುವವರೆಗೆ ಕುದಿಸಿ
* ಆನಂತರ ಕ್ಯಾಪ್ಸಿಕಂ ಹಾಕಿ 3-4 ನಿಮಿಷ ಬೇಯಿಸಿ ಉರಿಯಿಂದ ತೆಗೆದರೆ ರುಚಿಕರವಾದ ಕಡಾಯಿ ಅಣಬೆ ಗ್ರೇವಿ ಸವಿಯಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!