ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಣೆ ಉಪ್ಪಿಟ್ಟು ತಿಂದಿದ್ದೀರಾ ? ಇಲ್ಲಾ ಅಂತಾದ್ರೆ ಇಂದೇ ಟ್ರೈ ಮಾಡಿ ಸವಿದು ನೋಡಿ. ನೋಡಲು ಸೊಗಸು ಜೊತೆಗೆ ತಿನ್ನಲೂ ಬಾಯಿಗೆ ಒಳ್ಳೆಯ ರುಚಿ.
ಬೇಕಾಗುವ ಸಾಮಗ್ರಿಗಳು
* ನವಣೆ
* ತುಪ್ಪ
* ಜೀರಿಗೆ
* ಲವಂಗ
* ಏಲಕ್ಕಿ
* ಗೋಡಂಬಿ
* ಒಣದ್ರಾಕ್ಷಿ
* ಹಸಿ ಮೆಣಸಿನಕಾಯಿ
* ನೀರು
* ಬಟಾಣಿ
* ನಿಂಬೆರಸ
* ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
* ಮೊದಲು ನವಣೆಯನ್ನು 2-3 ಗಂಟೆಗಳ ನೀರಿನಲ್ಲಿ ನೆನೆ ಹಾಕಿ.
* ಈಗ ತುಪ್ಪವನ್ನು ಬಿಸಿ ಮಾಡಿ, ಜೀರಿಗೆ , ಲವಂಗ, ಏಲಕ್ಕಿ ಹಾಕಿ.
* ಅದಕ್ಕೆ ಗೋಡಂಬಿ, ಬಾದಾಮಿ, ಒಣ ದ್ರಾಕ್ಷಿ ಹಾಕಿ 10 ಸೆಕೆಂಡ್ ಫ್ರೈ ಮಾಡಿ.
* ಈಗ ಅದಕ್ಕೆ ಹಸಿ ಮೆಣಸಿನ ಕಾಯಿ ಸೇರಿಸಿ 2-3 ಸೆಕೆಂಡ್ ಫ್ರೈ ಮಾಡಿ. ನೀರು ಹಾಕಿ, ಬಟಾಣಿ (ಹಸಿ ಬಟಾಣಿ) ಹಾಕಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.
* ನೀರು ಕುದಿಯಲಾರಂಭಿಸಿದಾಗ ನವಣೆ ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿ.
* ಬೆಂದ ಮೇಲೆ ಉರಿಯಿಂದ ಇಳಿಸಿ ನಿಂಬೆರಸ ಸೇರಿಸಿ ಮಿಕ್ಸ್ ಮಾಡಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ನವಣೆ ಉಪ್ಪಿಟ್ಟು ಸವಿಯಲು ಸಿದ್ಧ.