CINE| ತಂದೆಯ ಹಾದಿಯಲ್ಲಿ ಮಗ, ಎಂಬಿ ಫೌಂಡೇಶನ್‌ನಲ್ಲಿ ಗೌತಮ್ ಸೇವೆ!

‌ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಿನ್ಸ್ ಮಹೇಶ್ ಬಾಬು ಸಾವಿರಾರು ಮಕ್ಕಳ ಪಾಲಿಗೆ ನಿಜವಾದ ಹೀರೋ ಆಗಿದ್ದಾರೆ. ಬಡ ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ಮಾಡಿಸುವ ಮೂಲಕ ಜನರ ಹೃದಯದಲ್ಲಿ ಉನ್ನತ ಸ್ಥಾನ ಗಳಿಸಿದ್ದಾರೆ. ಈಗಾಗಲೇ ತಮ್ಮ ಮಹೇಶ್‌ ಬಾಬು ಫೌಂಡೇಶನ್ ಮೂಲಕ ಹಲವು ವೈದ್ಯಕೀಯ ಸೇವೆಗಳನ್ನು ಮಾಡುತ್ತಿರುವ ಮಹೇಶ್ ತನ್ನ ಇಡೀ ಕುಟುಂಬ ಈ ಪ್ರತಿಷ್ಠಾನದ ಭಾಗವಾಗುವಂತೆ ನೋಡಿಕೊಂಡರು.

ಮಹೇಶ್ ಅವರ ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಎಂಬಿ ಫೌಂಡೇಶನ್‌ನ ಸೇವೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಮಹೇಶ್ ಅವರ ಪುತ್ರಿ ಸಿತಾರಾ ಕೂಡ ಮಹೇಶ್ ಫೌಂಡೇಶನ್‌ಗೆ ಬೆಂಬಲ ನೀಡುತ್ತಿದ್ದಾರೆ. ಆಕೆ ಈಗಾಗಲೇ ತನ್ನ ಪಾಕೆಟ್ ಮನಿ ಜೊತೆಗೆ ತಾನು ಮೊದಲು ಗಳಿಸಿದ ಜಾಹೀರಾತು ಹಣವನ್ನು ಎಂಬಿ ಫೌಂಡೇಶನ್‌ಗೆ ನೀಡಿದ್ದಾಳೆ. ಸಿತಾರಾ ಕೂಡ ಹೆಚ್ಚಿನ ಸೇವಾ ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈಗ ಗೌತಮ್ ಕೂಡ ಮಹೇಶ್ ಫೌಂಡೇಶನ್‌ನ ಭಾಗವಾಗಿದ್ದಾರೆ.

ಇತ್ತೀಚೆಗಷ್ಟೇ ಗೌತಮ್ ರೈನ್‌ಬೋ ಆಸ್ಪತ್ರೆಗಳಿಗೆ ಭೇಟಿ ನೀಡಿ ಎಂಬಿ ಫೌಂಡೇಶನ್‌ನಿಂದ ಚಿಕಿತ್ಸೆ ಪಡೆದ ಮಕ್ಕಳ ಆರೋಗ್ಯವನ್ನು ವಿಚಾರಿಸಿದರು. ಆ ಫೋಟೋಗಳನ್ನು ಎಂಬಿ ಫೌಂಡೇಶನ್ ಮತ್ತು ನಮ್ರತಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಎಂಬಿ ಫೌಂಡೇಶನ್‌ನ ಭಾಗವಾಗಿರುವ ಗೌತಮ್ ಸಾಂದರ್ಭಿಕವಾಗಿ ಕಾರ್ಡಿಯೋ ವಾರ್ಡ್‌ಗಳಲ್ಲಿ ಮಕ್ಕಳೊಂದಿಗೆ ಸಮಯ ಕಳೆಯುತ್ತಾರೆ. ಗೌತಮ್‌ ಭೇಟಿಯಿಂದಾಗಿ ಮಕ್ಕಳ ಮುಖದಲ್ಲಿ ನಗು ತುಂಬುತ್ತದೆ, ಇದಕ್ಕಾಗಿ ಗೌತಮ್‌ಗೆ ಮಕ್ಕಳ ಪೋಷಕರು ಧನ್ಯವಾದಗಳನ್ನು ತಿಳಿಸಿದ್ದಾರೆ. ಈಗ ಮಹೇಶ್ ಅಭಿಮಾನಿಗಳು ಮತ್ತು ನೆಟ್ಟಿಗರು ಗೌತಮ್ ಅವರನ್ನು ಅಭಿನಂದಿಸುತ್ತಿದ್ದಾರೆ. ತಂದೆಯ ಹಾದಿಯಲ್ಲಿ ಮಗ ಕೂಡ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂಬ ಕಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!