FOOD| ಬರೀ ಮ್ಯಾಗಿ ತಿನ್ನೋದಲ್ಲ, ಒಮ್ಮೆ ಪನೀರ್ ಮ್ಯಾಗಿಯೂ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮ್ಯಾಗಿ ಅನ್ನು ವಿವಿಧ ರೀತಿಯಾಗಿ ಮಾಡಿ ತಿಂದು ನೋಡಿರುತ್ತೀರಿ. ಆದರೆ ಒಮ್ಮೆ ಪನೀರ್‌ ಮ್ಯಾಗಿಯೂ ತಿಂದು ನೋಡಿ. ಇದು ಇನ್ನಷ್ಟು ರುಚಿಕರವಾಗಿರುತ್ತದೆ. ಪನೀರ್‌ ಮ್ಯಾಗಿ ಮಾಡಲು ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಮ್ಯಾಗಿ ಪ್ಯಾಕೆಟ್
ಈರುಳ್ಳಿ
ಮೆಣಸಿನ ಕಾಯಿ
ಟೊಮೆಟೊ
ಕ್ಯಾರೆಟ್
ಪನೀರ್
ಹಸಿಮೆಣಸಿನಕಾಯಿ
ಬೆಳ್ಳುಳ್ಳಿ ಎಸಳು
ಜೀರಿಗೆ
ಪುದೀನಾ ಪುಡಿ
ಎಣ್ಣೆ
ನೀರು
ಉಪ್ಪು

ಮಾಡುವ ವಿಧಾನ:

* ಮೊದಲು ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಕಾಯಿಸಬೇಕು. ಎಣ್ಣೆ ಬಿಸಿಯಾದಾಗ ಜೀರಿಗೆ, ಬೆಳ್ಳುಳ್ಳಿ, ಈರುಳ್ಳಿ ಹಾಕಿ ಹುರಿಯಬೇಕು.
* ಈಗ ಅದಕ್ಕೆ ದುಂಡು ಮೆಣಸಿನ ಕಾಯಿ ಹಾಗೂ ಕ್ಯಾರೆಟ್ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು.
* ನಂತರ ಹಸಿ ಮೆಣಸಿನಕಾಯಿ ಹಾಗೂ ಟೊಮೆಟೊ ಹಾಕಿ ಬೇಯಿಸಬೇಕು. ಈಗ ಪನೀರ್ ಹಾಕಿ ಸ್ವಲ್ಪ ಹೊತ್ತು ಹುರಿದು ನಂತರ ಎರಡು ಕಪ್ ನೀರು ಹಾಕಬೇಕು.
* ನೀರು ಕುದಿ ಬರುವಾಗ ಅದಕ್ಕೆ ಮ್ಯಾಗಿಯ ಮಸಾಲೆ ಪುಡಿ ಹಾಗೂ ಪುದೀನಾ ಪುಡಿ ಹಾಕಿ ಚಿಟಿಕೆಯಷ್ಟು ಉಪ್ಪು ಹಾಕಿ ನೀರು ಕುದಿ ಬಂದ ಮೇಲೆ ಮ್ಯಾಗಿ ಹಾಕಿ ಬೇಯಿಸಿ.

ಇದೀಗ ರುಚಿಕರವಾದ ಪನೀರ್‌ ಮ್ಯಾಗಿ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!