ಎಂಟೆದೆ ಬಂಟ: ವಿಷಸರ್ಪಗಳೆಂದರೆ ಈತನಿಗೆ ಭಯವೇ ಇಲ್ಲ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಾವುಗಳು ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ಗೊತ್ತು. ವಿಷಜಂತುಗಳನ್ನು ಹಿಡಿಯುವವರಲ್ಲಿ ಅನೇಕರ ಅಂತ್ಯ ಹಾವುಗಳಿಂದಲೇ ಆಗಿವೆ. ಇತ್ತೀಚಿಗೆ ವ್ಯಕ್ತಿಯೊಬ್ಬ ಹಾವುಗಳನ್ನು ಹಿಡಿಯುತ್ತಿರುವ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡುಗರ ನದೆ ನಡುಗಿಸುವಂತಿದೆ.

ಹಾವುಗಳ ಭಯವಿದ್ದರೂ ಅವುಗಳನ್ನು ಸಾಕುಪ್ರಾಣಿಗಳಾಗಿ ಸಾಕುವವರು ಇದ್ದಾರೆ. ಹರ್ಪಿಸ್ ಸಂಸ್ಕೃತಿ ಎಂದು ಕರೆಯಲ್ಪಡುವ ಈ ಹವ್ಯಾಸವು ಕೆಲವರಲ್ಲಿದೆ. ಇನ್‌ಸ್ಟಾಗ್ರಾಮ್ ಬಳಕೆದಾರರು ಹಂಚಿಕೊಂಡಿರುವ ವೀಡಿಯೊ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ.

ವೀಡಿಯೊದಲ್ಲಿ, ವ್ಯಕ್ತಿ ಧೈರ್ಯದಿಂದ ಐದಾರು ಹಾವುಗಳನ್ನು ಕೈಯಲ್ಲಿ ಹಿಡಿದಿದ್ದಾನೆ. ಅವುಗಳ ಅವನೆಡೆಗೆ ಮಾಡಿದ ಆಕ್ರಮಣವೂ ಅಷ್ಟೇ ಭಯವಾಗಿತ್ತು. ಒಂದು ಹಾವು ವ್ಯಕ್ತಿಯ ಮುಖಕ್ಕೆ ಕಚ್ಚಲು ಯತ್ನಿಸಿದೆ. ಅದೃಷ್ಟವಶಾತ್, ಅವನಿಗೆ ಏನೂ ಆಗಿಲ್ಲ. ನೋಡಲು ತುಂಬಾ ಭಯವಾಗುತ್ತಿದ್ದು, ಇಂತಹ ಸಾಹಸಗಳನ್ನು ಮಾಡಬೇಡಿ ಎಂದು ನೆಟ್ಟಿಗರು ಸಲಹೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!