BREAKFAST| ಪಲ್ಯ ಇಲ್ಲದೆಯೇ ತಿಂಡಿ ತಿನ್ಬೋದಾ? ಒಮ್ಮೆ ಟ್ರೈ ಮಾಡಿ ಆಲೂಗಡ್ಡೆ ದೋಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಳಗ್ಗೆ ರುಚಿ ರುಚಿಯಾದ ತಿಂಡಿ ತಿನ್ಬೇಕು ಅಂತ ಆಸೆ ಇರತ್ತೆ ಆದ್ರೆ ಮಾಡೋಕೆ ಅತಿಯಾದ ಸಮಯ ಕೂಡ ತೆಗೆದುಕೊಳ್ಳುತ್ತದೆ ಅಂತ ಹಲವರು ಯೋಚಿಸ್ತಾರೆ. ಈಗ ದೋಸೆ ತಿನ್ಬೇಕು ಅಂದ್ರೆ ಅದಕ್ಕೆ ಚಟ್ನಿ, ಪಲ್ಯ ಎಲ್ಲವನ್ನೂ ಮಾಡಬೇಕು ಎಂದು ಬೇಜರಾಗ್ತಿರೋರಿಗೆ ಇಲ್ಲಿದೆ ಒಂದು ಸಿಂಪಲ್‌ ಸಲ್ಯೂಷನ್‌. ಪಲ್ಯ ಇಲ್ಲದೆ ತಿನ್ನಲು ಒಮ್ಮೆ ಮಾಡಿ ನೋಡಿ ಆಲೂಗಡ್ಡೆ ದೋಸೆ.

ಬೇಕಾಗುವ ಸಾಮಾಗ್ರಿಗಳು:

*ಆಲೂಗಡ್ಡೆ(ಬೇಯಿಸಿ ಸಿಪ್ಪೆ ಸುಲಿದದ್ದು)
*ಮೈದಾ
*ಹಸಿಮೆಣಸು
*ಕೊತ್ತಂಬರಿ ಸೊಪ್ಪು
*ಎಣ್ಣೆ
*ಉಪ್ಪು

ಮಾಡುವ ವಿಧಾನ:

* ಮೊದಲಿಗೆ ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ಸುಲಿದು ಪಕ್ಕದಲ್ಲಿಡಿ.
* ಒಂದು ಪಾತ್ರೆಗೆ ಸಿಪ್ಪೆ ಸುಲಿದ ಆಲೂಗಡ್ಡೆ ಹಾಕಿ. ಇದಕ್ಕೆ ಮೈದಾ ಹಾಗೂ ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿಕೊಂಡು ಇಡ್ಲಿ ಹಿಟ್ಟಿನ ಹದಕ್ಕೆ ತನ್ನಿ.
* ಈಗ ಹಿಟ್ಟಿಗೆ ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ.
* ನಂತರ ತವಾ ಬಿಸಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ. ನಂತರ ದೋಸೆ ಹಿಟ್ಟನ್ನು ತೆಗೆದುಕೊಂಡು ತವಾ ಮೇಲೆ ದುಂಡಗೆ ಹಾಕಿ. ದೋಸೆ ಚೆನ್ನಾಗಿ ಬೇಯುವಂತೆ ನೋಡಿಕೊಳ್ಳಿ.
* ನಂತರ ದೋಸೆಯನ್ನು ತಟ್ಟೆಗೆ ರವಾನಿಸಿ. ಈಗ ಬಿಸಿ ಬಿಸಿಯಾದ ಆಲೂಗಡ್ಡೆ ದೋಸೆ ಸವಿಯಲು ಸಿದ್ದ.

ಆಲೂಗಡ್ಡೆ ದೋಸೆ ತಿನ್ನೋಕೆ ಬೋರ್‌ ಆದ್ರೆ ಸ್ವಲ್ಪ ಬೆಣ್ಣೆ ಅಥವಾ ತುಪ್ಪದ ಜೊತೆಯೂ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!