Thursday, September 21, 2023

Latest Posts

ಸುಳ್ಳು ಸುದ್ದಿಗಳನ್ನು ಹರಡಿದ ಆರೋಪ: 8 ಯುಟ್ಯೂಬ್ ಚಾನಲ್‌ ಬ್ಯಾನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸುಳ್ಳು ಸುದ್ದಿ ಮತ್ತು ಮಾಹಿತಿಗಳನ್ನು ಹರಡಿದ ಆರೋಪದ ಮೇಲೆ ಕೇಂದ್ರ ಸರ್ಕಾರ ಮಂಗಳವಾರದಂದು ಎಂಟು ಯುಟ್ಯೂಬ್ ಚಾನಲ್‌ಗಳನ್ನು ಬ್ಯಾನ್‌ ಮಾಡಿದೆ.

ಯಹನ್‌ ಸಚ್‌ ದೇಖೋ, ಕ್ಯಾಪಿಟಲ್‌ ಟಿವಿ, ಕೆಪಿಎಸ್‌ ನ್ಯೂಸ್‌, ಸರ್ಕಾರಿ ವ್ಲಾಗ್‌, ಅರ್ನ್‌ ಟೆಕ್‌ ಇಂಡಿಯಾ, ಎಸ್‌ಪಿಎನ್‌9 ನ್ಯೂಸ್‌, ಎಜುಕೇಷನಲ್‌ ಡೋಸ್ತ್ ಮತ್ತು ವರ್ಲ್ಡ್‌ ಬೆಸ್ಟ್‌ ನ್ಯೂಸ್‌ ನಿಷೇಧಕ್ಕೊಳಗಾದ ಎಂಟು ಯೂಟ್ಯೂಬ್‌ ಚಾನಲ್‌ಗಳಾಗಿವೆ.

ಈ ಎಂಟು ಯೂಟ್ಯೂಬ್ ಚಾನಲ್‌ಗಳು ಇತ್ತೀಚೆಗೆ ಲೋಕಸಭೆ ಚುನಾವಣೆ ಹಾಗೂ ಇವಿಎಂ ಮಷಿನ್‌ಗಳ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದವು ಎಂದು ಪ್ರೆಸ್ ಇನ್‌ಫರ್ಮೆಶನ್ ಬ್ಯುರೊ (PCB) ಸರ್ಕಾರದ ಗಮನಕ್ಕೆ ತಂದಿತ್ತು. ಅದರ ಆಧಾರದ ಮೇಲೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಈ ಕ್ರಮ ಕೈಗೊಂಡಿದೆ.

ಇದರಲ್ಲಿ ಎಸ್‌ಪಿಎನ್9 ನ್ಯೂಸ್ 4.8 ಮಿಲಿಯನ್ ಫಾಲೊವರ್‌ಗಳನ್ನು ಹೊಂದಿತ್ತು. ಇದು 148 ಕೋಟಿ ವೀಕ್ಷಣೆ ಕಂಡಿತ್ತು. ವರ್ಲ್ಡ್ ಬೆಸ್ಟ್ ನ್ಯೂಸ್ ಯೂಟ್ಯೂಟ್‌ ಚಾನಲ್ ಸಹ 1.7 ಮಿಲಿಯನ್ ಫಾಲೊವರ್‌ಗಳು ಹಾಗೂ 18 ಕೋಟಿ ವೀಕ್ಷಣೆ ಕಂಡಿತ್ತು.‌

ಕೇಂದ್ರ ಸರ್ಕಾರ ಈ ಹಿಂದೆಯೂ ಇಂತಹದೇ ಆರೋಪದ ಮೇಲೆ ಅನೇಕ ಯುಟ್ಯೂಬ್ ಚಾನಲ್‌ಗಳನ್ನು ನಿಷೇಧಿಸಿತ್ತು. ಸಂಬಂಧಿಸಿದ ಇಲಾಖೆಯ ಆದೇಶದ ಮೇಲೆ ಯುಟ್ಯೂಬ್ ತಾಂತ್ರಿಕ ಸಿಬ್ಬಂದಿ ಚಾನಲ್‌ಗಳನ್ನು ನಿಷೇಧಿಸಲಾಗುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!