ಹೊಸದಿಗಂತ ಡಿಜಿಟಲ್ ಡೆಸ್ಕ್:
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಲ್ಲು ಸಕ್ಕರೆಯ ಲಡ್ಡು ಮಾಡಿ ಸವಿದು ನೋಡಿ.
ಬೇಕಾಗುವ ಸಾಮಗ್ರಿಗಳು
ಗೋಧಿ ಹಿಟ್ಟು
ಬೆಲ್ಲದ ಪುಡಿ
ಕಲ್ಲು ಸಕ್ಕರೆ
ಕೊಬ್ಬರಿ
ಬಾದಾಮಿ
ಗೋಡಂಬಿ
ಒಣದ್ರಾಕ್ಷಿ
ಏಲಕ್ಕಿ ಪುಡಿ
ಗಸೆಗಸೆ
ಮಾಡುವ ವಿಧಾನ
* ದಪ್ಪ ತಳವಿರುವ ಪ್ಯಾನ್ ತೆಗೆದುಕೊಂಡು ಬಿಸಿ ಮಾಡಿ.
* ಈಗ ಅದಕ್ಕೆ ತುಪ್ಪ ಹಾಕಿ, ತುಪ್ಪ ಕರಗಿದಾಗ ಕತ್ತರಿಸಿದ ಬಾದಾಮಿ, ಗೋಡಂಬಿ ಹಾಕಿ ಚೆನ್ನಾಗಿ ಹುರಿದು ಒಂದು ಬಟ್ಟಲಿಗೆ ರವಾನಿಸಿ.
* ನಂತರ ಅವುಗಳನ್ನು ತರಿತರಿಯಾಗಿ ರುಬ್ಬಿಕೊಳ್ಳಿ.
* ಈ ಮಿಶ್ರಣಕ್ಕೆ ಕೊಬ್ಬರಿ ಹಾಕಿ ಮತ್ತೆ ಪ್ಯಾನ್‌ನಲ್ಲಿ 2 ನಿಮಿಷ ಫ್ರೈ ಮಾಡಿ ನಂತರ ಒಂದು ಪ್ಲೇಟ್‌ಗೆ ಹಾಕಿ.
* ಈಗ ಒಂದು ಪಾತ್ರೆಗೆ ತುಪ್ಪ ಹಾಕಿ, ಅದಕ್ಕೆ ಕಲ್ಲುಸಕ್ಕರೆ, ನಂತರ ಪುಡಿ ಮಾಡಿಟ್ಟ ನಟ್ಸ್ ಹಾಕಿ ಗ್ಯಾಸ್ ಆಫ್ ಮಾಡಿ. ನಂತರ ಅವುಗಳನ್ನು ಒಂದು ತಟ್ಟೆಯಲ್ಲಿ ಹಾಕಿಡಿ.
* ಈಗ ಮತ್ತೆ ಪ್ಯಾನ್ ಬಿಸಿ ಮಾಡಿ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಗೋಧಿ ಹಿಟ್ಟು ಹಾಕಿ ರೋಸ್ಟ್ ಮಾಡಿ.
* ನಂತರ ಹುರಿದ ನಟ್ಸ್ ಸೇರಿಸಿ. ಈಗ ಏಲಕ್ಕಿ, ಬೆಲ್ಲದ ಪುಡಿ ಹಾಕಿ ಮಿಕ್ಸ್ ಮಾಡಿ.
ಈಗ ಅವುಗಳಿಂದ ಚಿಕ್ಕ-ಚಿಕ್ಕ ಉಂಡೆಗಳನ್ನು ಕಟ್ಟಿ. ನಂತರ ಒಣದ್ರಾಕ್ಷಿಯಿಂದ ಅಲಂಕರಿಸಿ.