ರಾಜಧಾನಿ ಬೆಂಗಳೂರಿನಲ್ಲಿ ದಾಖಲೆಯ ಮಳೆ, ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಡೀ ದಾಖಲೆಯ ಮಳೆ ಸುರಿದಿದೆ. ಒಂದು ತಿಂಗಳ ಬಳಿಕ ಸಿಲಿಕಾನ್ ಸಿಟಿ ತಂಪಾಗಿದ್ದು, ಒಂದೇ ರಾತ್ರಿಯಲ್ಲಿ ಬರೋಬ್ಬರಿ 64.8 ಮಿಮೀ ಮಳೆಯಾಗಿದೆ.

ಇಡೀ ಆಗಸ್ಟ್‌ನಲ್ಲಿ ಒಂದು ದಿನವೂ ಮಳೆಯಾಗಿರಲಿಲ್ಲ, ಕೆಲವೊಮ್ಮೆ ಶುಷ್ಕ ವಾತಾವರಣವಿತ್ತಾದರೂ ಮಳೆ ಬಂದಿರಲಿಲ್ಲ. ಆಗಸ್ಟ್‌ನ ಕಡೆಯ ದಿನ ಭಾರೀ ಮಳೆ ಸುರಿದಿದ್ದು, ಬೆಂಗಳೂರು ಮತ್ತೆ ತಂಪಿನ ನಗರಿಯಾಗಿದೆ.

ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ೫೨ ಮಿಮೀ ಮಳೆಯಾಗಿದ್ದು, ರಾಜ್‌ಮಹಲ್ ಗುಟ್ಟಹಳ್ಳಿಯಲ್ಲಿ ಗರಿಷ್ಠ ಅಂದರೆ 111.5 ಮಿಮೀ ಮಳೆಯಾಗಿದೆ.

ಯಲಹಂಕ, ಚಾಮರಾಜಪೇಟೆ, ಕಾಮಾಕ್ಷಿಪಾಳ್ಯ, ಶಿವಾಜಿನಗರ, ಮಾಗಡಿ ರೋಡ್ ಬಳಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇನ್ನು ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಓಲ್ಡ್ ಏರ್‌ಪೋರ್ಟ್ ರೋಡ್ ಕೋರಮಂಗಲ ಸೇರಿದಂತೆ ಹಲವು ರಸ್ತೆಗಳು ಜಲಾವೃತವಾಗಿವೆ.

ಇನ್ನೂ ಎರಡು ದಿನ ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!