RECIPE| ಚಪಾತಿ ಜೊತೆಗೆ ಸವಿಯಿರಿ ಟೊಮೆಟೊ-ಗೋಡಂಬಿ ಕರಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಟೊಮೆಟೊ
ಶುಂಠಿ ಪೇಸ್ಟ್
ಏಲಕ್ಕಿ
ಚೆಕ್ಕೆ
ಲವಂಗ
ಗೋಡಂಬಿ
ತೆಂಗಿನ ತುರಿ
ಗರಂ ಮಸಾಲ ಪುಡಿ
ಕೆಂಪು ಮೆಣಸಿನ ಪುಡಿ
ಸಕ್ಕರೆ
ಸಾಸಿವೆ
ಜೀರಿಗೆ
ಎಣ್ಣೆ

ಮಾಡುವ ವಿಧಾನ:

* ಮೊದಲು ಸ್ವಲ್ಪ ಟೊಮೆಟೊವನ್ನು ಮಸಾಲೆಗೆ, ಇನ್ನೂ ಸ್ವಲ್ಪ ಹುರಿಯುವುದಕ್ಕೆ ಇಟ್ಟಿರಬೇಕು.

* ಮೊದಲು ಮಿಕ್ಸಿ ಬಟ್ಟಲಿಗೆ ಮಸಾಲೆಗೆಂದು ಟೊಮೆಟೊ, ಶುಂಠಿ ಪೇಸ್ಟ್, ಏಲಕ್ಕಿ, ಚೆಕ್ಕೆ, ಲವಂಗ, ಗೋಡಂಬಿ, ತೆಂಗಿನ ತುರಿ ಹಾಕಿಕೊಂಡು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು.

* ಈಗ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದರಲ್ಲಿ ಸಾಸಿವೆ ಮತ್ತು ಜೀರಿಗೆಯನ್ನು ಹುರಿದುಕೊಳ್ಳಬೇಕು.

* ಸಾಸಿವೆ, ಜೀರಿಗೆಯನ್ನು ಹುರಿದುಕೊಂಡ ನಂತರ ರುಬ್ಬಿಕೊಂಡ ಮಿಶ್ರಣವನ್ನು ಅದಕ್ಕೆ ಹಾಕಿ ಸ್ವಲ್ಪ ಸಕ್ಕರೆ ಬೆರೆಸಿ ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿಕೊಳ್ಳಿ.

* ಬೇಯುತ್ತಿರುವ ಮಿಶ್ರಣಕ್ಕೆ ಗರಂ ಮಸಾಲೆ ಪುಡಿ, ಕೆಂಪು ಮೆಣಸಿನಕಾಯಿ ಪುಡಿಯನ್ನು ಹಾಕಬೇಕು.

* ಕೊನೆಗೆ ಕತ್ತರಿಸಿದ ಟೊಮೆಟೊ ಮತ್ತು ಚಿಕ್ಕ ಗೋಡಂಬಿ ಚೂರುಗಳನ್ನು ಹಾಕಿ ಟೊಮೆಟೊ ಕರಗುವ ತನಕ ಬೇಯಿಸಿದರೆ ಟೊಮೆಟೊ ಗೋಡಂಬಿ ಕರಿ ತಿನ್ನಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!