ತರಕಾರಿ ಹಾಗೂ ಓಟ್ಸ್‌ನ ರುಚಿಯಾದ ರೆಸಿಪಿ ಇಲ್ಲಿದೆ, ಹೇಗೆ ಮಾಡೋದು ನೋಡಿ..
ಮಾಡುವ ವಿಧಾನ
ಬೀನ್ಸ್, ಆಲೂಗಡ್ಡೆ, ಕ್ಯಾರೆಟ್ ಹಾಗೂ ನಿಮ್ಮಿಷ್ಟದ ತರಕಾರಿಗಳನ್ನು ಪುಟ್ಟದಾಗಿ ಕತ್ತರಿಸಿ ಇಟ್ಟುಕೊಳ್ಳಿ
ಪ್ಯಾನ್‌ಗೆ ಸ್ವಲ್ಪ ಎಣ್ಣೆ, ಸಾಸಿವೆ, ಜೀರಿಗೆ ಹಾಕಿದ ನಂತರ ಈರುಳ್ಳಿ, ಹಸಿಮೆಣಸಿನ ಪೇಸ್ಟ್ ಹಾಕಿ
ನಂತರ ಇದಕ್ಕೆ ಟೊಮ್ಯಾಟೊ ಹಾಗೂ ನಿಮ್ಮಿಷ್ಟದ ತರಕಾರಿಗಳನ್ನು ಹಾಕಿಕೊಳ್ಳಿ. ಉಪ್ಪು ಹಾಕಿ ಮುಚ್ಚಿ ಬೇಯಿಸಿ
ನಂತರ ಅರಿಶಿಣ, ಪೆಪ್ಪರ್ ಹಾಗೂ ಸ್ವಲ್ಪ ಮ್ಯಾಗಿ ಮಸಾಲಾ ಹಾಕಿ ಬಾಡಿಸಿ
ನಂತರ ಇದಕ್ಕೆ ಓಟ್ಸ್ ಹಾಕಿ, ನೀರು ಹಾಕಿ ಮುಚ್ಚಿ ಬೇಯಿಸಿ. ನೋಡಿಕೊಂಡು ಮತ್ತೆ ನೀರು ಹಾಕಿ ಬೇಯಿಸಿದ್ರೆ ಟೇಸ್ಟಿ ವೆಜಿಟೇಬಲ್ ಓಟ್ಸ್ ರೆಡಿ