MUST READ | ಡೆಡ್‌ಲೈನ್‌ನಲ್ಲಿ ಕೆಲಸ ಮುಗಿಸೋಕೆ ಇಲ್ಲಿದೆ ಮೋಟಿವೇಷನ್, ಧೈರ್ಯ ಇದ್ರೆ ಈ ಕೆಫೆಗೆ ಹೋಗಿ ನೋಡಿ..

ಮೇಘನಾ ಶೆಟ್ಟಿ, ಶಿವಮೊಗ್ಗ

ರೆಸ್ಟೋರೆಂಟ್‌ಗೆ ಹೋಗೋದು, ಬರೋದು, ರೆಸ್ಟೋರೆಂಟ್‌ನಲ್ಲಿ ಎಷ್ಟು ಹೊತ್ತು ಇರಬೇಕು? ಯಾವಾಗ ಹೊರಬರಬೇಕು? ಇದೆಲ್ಲಾ ನಮ್ಮಿಷ್ಟ ಅಲ್ವಾ? ಆದರೆ ಈ ರೆಸ್ಟೋರೆಂಟ್‌ನಲ್ಲಿ ವಿಚಿತ್ರ ನಿಯಮ ಇದೆ, ಇಲ್ಲಿ ಒಳಗೆ ಹೋಗೋದಷ್ಟೇ ನಮ್ಮಿಷ್ಟ, ಆದರೆ ಹೊರಗೆ ಬರೋದು ಹೊಟೇಲ್ ಮಾಲೀಕನಿಷ್ಟ!

ಇದೆಂಥಾ ವಿಚಿತ್ರ ಹೋಟೆಲ್? ಇದರ ಕಥೆ ಏನು ನೋಡಿ..

ಈ ಕೆಫೆ ಇರೋದು ಟೋಕಿಯೋದಲ್ಲಿ. ಕೆಫೆಯ ಬಾಗಿಲಿನಿಂದ ಬಗ್ಗಿ ನೋಡಿದ್ರೆ ನಿಮಗೆ ನೂರಾರು ಮಂದಿ ಲ್ಯಾಪ್‌ಟ್ಯಾಪ್ ಹಿಡಿದುಕೊಂಡು ಕುಟ್ಟುತ್ತಾ ಇರೋದು ಕಾಣಿಸುತ್ತದೆ. ಇಲ್ಲಿ ಸ್ನೇಹಿತರ ಜೊತೆ ಮಾತನಾಡ್ಕೋಂಡು, ಹಾಯಾಗಿ ಕಾಲ ಕಳೆಯೋದಕ್ಕೆ ಯಾರೂ ಬರೋದಿಲ್ಲ. ಇಲ್ಲಿ ಕೆಲಸ ಮಾಡೋದಕ್ಕೆ ಜನ ಬರ‍್ತಾರೆ.

This cafe in Japan is only for writers on a deadline, and they won't let  them leave until their goal is met - Times of Indiaಈ ಕೆಫೆ ಓನರ್ ಹೆಸರು ಟಾಕುಯಾ. ಕೆಲಸ ಮಾಡಬೇಕು, ಪ್ರಾಜೆಕ್ಟ್ ಮುಗಿಸಬೇಕು ಆದರೆ ಆಗ್ತಾ ಇಲ್ಲ ಅನ್ನೋರಿಗೆ ಇದು ಹೇಳಿ ಮಾಡಿಸಿದ ಕೆಫೆ!
ಯಾಕೆ ಗೊತ್ತಾ? ಟಾಕುಯಾ ಕೆಫೆ ಒಳಗೆ ಹೋಗುವವರನ್ನು ಕೂರಿಸಿಕೊಂಡು, ಅವರಿಗೆ ಏನು ಕೆಲಸ? ಯಾವ ಪ್ರಾಜೆಕ್ಟ್? ಆ ಪ್ರಾಜೆಕ್ಸ್ ಮುಗಿಸೋದಕ್ಕೆ ಎಷ್ಟು ಸಮಯ ಬೇಕು? ಇದನ್ನೆಲ್ಲಾ ಬರೆಸಿಕೊಳ್ಳುತ್ತಾರೆ. ಆ ಪ್ರಾಜೆಕ್ಸ್ ಅಥವಾ ಕೆಲಸ ಮುಗಿಯುವವರೆಗೂ ಕೆಫೆಯಿಂದ ಜನರಿಗೆ ಮುಕ್ತ ಇಲ್ಲ.

Manuscript Writing Cafe – where writers facing deadlines can't leave till  their work is doneಕೆಫೆಯಿಂದ ಕೆಲಸ ಮುಗಿಯುವವರೆಗೂ ಹೊರಗೆ ಬರೋದಿಲ್ಲ ಅನ್ನೋ ಅಗ್ರೀಮೆಂಟ್‌ಗೆ ಟಾಕುಯಾ ಸಹಿ ಮಾಡಿಸ್ಕೋತಾರೆ, ನಂತರ ಅವರನ್ನು ಒಳಗೆ ಬಿಡ್ತಾರೆ. ಕೆಲಸ ಮುಗಿಸಿ ಅವರು ವಾಪಾಸಾಗಬಹುದು.

Manuscript Writing Cafe – where writers facing deadlines can't leave till  their work is doneಟಾಕುಯಾ ಪ್ರತೀ ಗಂಟೆಗೊಮ್ಮೆ ನಿಮ್ಮ ಕೆಲಸವನ್ನು ಚೆಕ್ ಮಾಡ್ತಾ ನಿಲ್ತಾರೆ, ನಿಮ್ಮ ಬಾಸ್ ಬೇಕು, ಇವರು ಬೇಡ ಅನ್ನೋವಷ್ಟು ಪ್ರೆಶರ್ ಹಾಕಿ ಕೆಲಸ ಮುಗಿಸುವಂತೆ ಮಾಡ್ತಾರೆ.

This Tokyo Cafe Is For Writers Only and Patrons Can Leave Once Writing Goal  For the Day is Reachedಜನ ಇನ್ನಷ್ಟು ಪ್ರೊಡಕ್ಟೀವ್ ಆಗಬೇಕು, ಕೆಲಸ ಮಾಡೋದಕ್ಕೆ ಅವರಿಗೆ ಮೋಟಿವೇಷನ್ ಬೇಕು, ದುಡ್ಡು ಕೊಟ್ಟು ಕೆಫೆಯಲ್ಲಿ ಕೂತಿರುವಾಗ ದುಡ್ಡು ವೇಸ್ಟ್ ಆಗುವ ಭಯಕ್ಕೆ ಹಾಗೂ ಮನೆಗೆ ಹೋಗಬೇಕಲ್ಲಾ ಅನ್ನೋ ಹಂಬಲಕ್ಕಾದ್ರೂ ಬೇಗ ಬೇಗ ಕೆಲಸ ಮುಗಿಸ್ತಾರೆ. ಕೆಲವರಿಗಾಗಿ ಟಾಕುಯಾ ರಾತ್ರಿಯಿಡೀ ಕೆಫೆಯಲ್ಲಿ ಕುಳಿತಿರುವುದೂ ಇದೆ. ನೀವು ಕೊಟ್ಟ ಟೈಮ್‌ನಲ್ಲಿ ಕೆಲಸ ಮುಗಿಸದೇ ಹೋದ್ರೆ ಗಂಟೆಗೆ 10 ಪಟ್ಟು ಹೆಚ್ಚು ದುಡ್ಡು ಕೊಟ್ಟು ಕೆಫೆಯಿಂದ ಮುಕ್ತಿ ಪಡೆಯಬೇಕಾಗುತ್ತದೆ. ನೆಕ್ಸ್ಟ್ ಟೈಮ್ ದೊಡ್ಡ ಡೆಡ್‌ಲೈನ್ ಇದ್ದಾಗ ಈ ಕೆಫೆಗೆ ಭೇಟಿ ಕೊಡ್ತೀರಾ?

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!