ಸಾಮಾಗ್ರಿಗಳು
ಪನ್ನೀರ್: ½ ಬಟ್ಟಲು
ಹಾಲು: 2 ಬಟ್ಟಲು
ಕಾರ್ನ್ ಫ್ಲೋರ್: 2 ಚಮಚ
ಸಕ್ಕರೆ: 2-3 ಚಮಚ
ಏಲಕ್ಕಿ ಪುಡಿ: ಸ್ವಲ್ಪ
ಪಿಸ್ತಾ: 2 ಚಮಚ
ಕೇಸರಿ: ಸ್ವಲ್ಪ
ಬಾದಾಮಿ: 2 ಚಮಚ
ಮಾಡುವ ವಿಧಾನ
ಒಂದು ಪಾತ್ರೆಗೆ ಒಂದು ಕಪ್ ಹಾಲನ್ನು ಹಾಕಿ ಅದಕ್ಕೆ ಕೇಸರಿಯನ್ನು ಹಾಕಿ ನೆನೆಸಿಡಿ. ಸ್ವಲ್ಪ ತಣ್ಣನೆ ಹಾಲಿಗೆ ಕಾರ್ನ್ ಫ್ಲೋರ್ ಹಾಕಿ ಮಿಕ್ಸ್ ಮಾಡಿ.
ಇನ್ನೊಂದು ಪಾತ್ರೆಗೆ ಉಳಿದ ಹಾಲನ್ನು ಹಾಕಿ ಕುದಿಸಿ. ಹಾಲು ಕುದಿಯುತ್ತಿರುವಾಗ ಕಾರ್ನ್ಫೋರ್ ಮಿಶ್ರಿತ ಹಾಲನ್ನು ಹಾಕಿ 10 ನಿಮಿಷ ಕೈ ಆಡಿಸಿ. ಹಾಲು ಸ್ವಲ್ಪ ದಪ್ಪಗಾಗುತ್ತದೆ.
ಇದಕ್ಕೆ ಕೇಸರಿಯುಕ್ತ ಹಾಲನ್ನು ಹಾಕಿ. ನಂತರ ಪನ್ನೀರ್ ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ. 10 ನಿಮಿಷ ಕುದಿಸಿದ ನಂತರ ಏಲಕ್ಕಿ ಪುಡಿ, ಪಿಸ್ತಾ ಪುಡಿ, ಬಾದಾಮಿ ಪುಡಿಯನ್ನು ಹಾಕಿ ಕುದಿಸಿ. ಇದೀಗ ಬಿಸಿ ಬಿಸಿ ಪನ್ನೀರ್ ಖೀರ್ ಸವಿಯಲು ಸಿದ್ಧ.