ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮೆಲ್ಲರ ಮನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ಕ್ಯಾಪ್ಟನ್ ಅರ್ಜುನ ಮೃತಪಟ್ಟು 57 ದಿನಗಳು ಕಳೆದಿವೆ.
57 ದಿನಗಳ ನಂತರ ಅರ್ಜುನ ಕಾಡಾನೆ ಜೊತೆ ಹೋರಾಡಿದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಟಿಫ್ ಸಿಬ್ಬಂದಿ ಪ್ರವೀಣ್ ವಿಡಿಯೋ ಸೆರೆಹಿಡಿದಿದ್ದಾರೆ.
ಅರ್ಜುನ ಗಂಭೀರವಾಗಿ ಗಾಯಗೊಂಡಿದ್ದು, ರಕ್ತ ಸುರಿಯುತ್ತಿದ್ದರೂ ಸೈನಿಕನಂತೆ ಕಾಡಾನೆ ಜೊತೆ ಕಾದಾಡಿರುವ ದೃಶ್ಯ ಇದಾಗಿದೆ.
ಕ್ಯಾಪ್ಟನ್ ಅರ್ಜುನ ವೀರ ಮರಣವನ್ನು ಹೊಂದಿ ಇಂದಿಗೆ 57 ದಿನಗಳು ಕಳೆದಿವೆ. ಅಂಬಾರಿ ಹೊತ್ತಿದ್ದ ಅರ್ಜುನ ಕಾಡಾನೆ ವಿರುದ್ಧ ಹೋರಾಡುವ ಕೊನೆಯ ವಿಡಿಯೋ ಇದಾಗಿದ್ದು, ಈ ವಿಡಿಯೋವನ್ನು ಇಟಿಎಫ್ ಸಿಬ್ಬಂದಿ ಪ್ರವೀಣ್ ಚಿತ್ರೀಕರಿಸಿದ್ದಾರೆ.#Arjana #elephant #sakleshpura #hassan pic.twitter.com/acJK9Aba93
— Harshith Achrappady (@HAchrappady) January 30, 2024