ಜಾರ್ಖಂಡ್ ಸಿಎಂ ನಾಪತ್ತೆ: ಹುಡುಕಿ ಕೊಟ್ಟವರಿಗೆ ಬಹುಮಾನ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಎಲ್ಲಿದ್ದಾರೆ ಎಂಬುದನ್ನು ಕಾನೂನು ಜಾರಿ ಅಧಿಕಾರಿಗಳು ಟ್ರ್ಯಾಕ್ ಮಾಡ್ತಿದ್ದಾರೆ. 28 ಗಂಟೆಗಳ ಕಾಲ ನಾಪತ್ತೆಯಾಗಿದ್ದ ಸೋರೆನ್‌ನ ಪತ್ತೆಗೆ ಎಲ್ಲಾ ರೀತಿಯ ಸರ್ಕಸ್ ಮಾಡಲಾಗ್ತಿದೆ. ಈ ಪ್ರಕರಣವು ಇದೀಗ ಜಾರ್ಖಂಡ್​​ನಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ಜಾರ್ಖಂಡ್ ರಾಜ್ಯ ಬಿಜೆಪಿ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಬಬುಲಾಲ್ ಮರಂಡಿ ಅವರು ಸಾಮಾಜಿಕ ಮಾಧ್ಯಮದಲ್ಲಿ “ಮುಖ್ಯಮಂತ್ರಿಗಳು ಕಾಣೆಯಾಗಿದ್ದಾರೆ” ಎಂದು ಪೋಸ್ಟ್ ಮಾಡಿದ್ದಾರೆ. ಯಾರಾದರೂ ನೋಡಿದ್ದಲ್ಲಿ, ದಯವಿಟ್ಟು ಈ ವಿಳಾಸಕ್ಕೆ ವರದಿ ಮಾಡಿ. ಮಾಹಿತಿ ಸರಿಯಾಗಿದ್ದರೆ 11 ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದರು.

ಈ ಮಧ್ಯೆ, ಜಾರ್ಖಂಡ್ ಮುಖ್ಯಮಂತ್ರಿ ಕಳೆದ 28 ಗಂಟೆಗಳಿಂದ ನಾಪತ್ತೆ ಆಗಿದ್ದಾರೆ. ದೆಹಲಿಯ ನಿವಾಸದಿಂದ ನಾಪತ್ತೆಯಾಗಿರುವ ಸಿಎಂ ಹೇಮಂತ್ ಸೊರೆನ್ ಎಲ್ಲಿದ್ದಾರೆಂದು ಗೊತ್ತಿಲ್ಲ. ಇತ್ತ ದೆಹಲಿ ನಿವಾಸದ ಮೇಲೆ ದಾಳಿ ಮಾಡಿರುವ ಇಡಿ ಅಧಿಕಾರಿಗಳು 36 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!