ಇಲ್ಲಿ ಸಂಚಾರಿ ಪೊಲೀಸರಿಗೆ ಬಂತು ಕೂಲ್ ಕೂಲ್ ಹೆಲ್ಮೆಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ದೇಶದಲ್ಲಿ ಬಿಸಿಲ ತಾಪ ಏರುತ್ತಿದೆ. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ರೆ ಇತ್ತ ಈ ಬಿಸಿನಲ್ಲೇ ನಿಂತು ಪೊಲೀಸರು ಕರ್ತವ್ಯ ನಿಭಾಯಿಸುವುದು ಅನಿವಾರ್ಯ.

ಇದನ್ನು ಅರಿತ ಗುಜರಾತ್‌ ಪೊಲೀಸರು ಬಿರು ಬಿಸಿನಲ್ಲೂ ನಿಂತು ಕರ್ತವ್ಯ ನಿಭಾಯಿಸುವ ಪೊಲೀಸರಿಗೆ ಎಸಿ ಹೆಲ್ಮೆಟ್ ನೀಡುತ್ತಿದ್ದಾರೆ.

ಹೌದು, ಎಷ್ಟೇ ಬಿಸಿಲಿನಲ್ಲಿ ನಿಂತರೂ ಈ ಹೆಲ್ಮೆಟ್ ಪೊಲೀಸರ ತಲೆಯನ್ನು ಕೂಲ್ ಕೂಲ್ ಮಾಡಲಿದೆ. ವಡೋದರದಲ್ಲಿ ಬಿಸಿಲಿನ ತಾಪಮಾನ 40 ರಿಂದ 42 ಡಿಗ್ರಿ ದಾಖಲಾಗಿದೆ. ಹೀಗಾಗಿ ಗುಜರಾತ್‌ನ ವಡೋದರ ಟ್ರಾಫಿಕ್ ಪೊಲೀಸರಿಗೆ ಈ ಎಸಿ ಹೆಲ್ಮೆಟ್ ನೀಡಲಾಗಿದೆ.

ಈ ಅತ್ಯಾಧುನಿಕ ಹೆಲ್ಮೆಟ್ ಒಂದು ಬಾರಿ ಚಾರ್ಜ್ ಮಾಡಿದರೆ ಸತತ 8 ಗಂಟೆಗಳ ಕಾಲ ತಂಪು ನೀಡಲಿದೆ. ಮುಖಕ್ಕೆ ಬಿಸಿಲು ತಾಗದಂತೆ ಶೀಲ್ಡ್, ಚಾರ್ಜಿಂಗ್ ಪಾಯಿಂಟ್ ಸೇರಿದಂತೆ ಅತ್ಯಂತ ಸೂಕ್ಷ್ಮವಾಗಿ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿದೆ. ಈ ಹೆಲ್ಮೆಟ್ ಧರಿಸುವುದರಿಂದ ಪೊಲೀಸರು ಬಿರು ಬಿಸಿಲಿನಲ್ಲೂ ಕೂಲ್ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಿದೆ.

ಸದ್ಯ ವಡೋದರ ಪೊಲೀಸರಿಗೆ ನೀಡಲಾಗಿರುವ ಈ ಎಸೆ ಹೆಲ್ಮೆಟ್ ಪ್ರಯೋಗಾತ್ಮಕವಾಗಿ ನೀಡಲಾಗಿದೆ. ಇದೀಗ ವಡೋದರ ಪೊಲೀಸರು ಈ ಎಸಿ ಹೆಲ್ಮೆಟ್ ಧರಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದರೆ. ಟ್ರಾಫಿಕ್ ಪೊಲೀಸರು ರಸ್ತೆಗಳಲ್ಲಿ ಇದೆ ಎಸಿ ಹೆಲ್ಮೆಟ್ ಹಾಕಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹೆಲ್ಮೆಟ್‌ನಿಂದ ಪೊಲೀಸರು ಬಿಸಿಲಿನಲ್ಲೂ ಕೂಲ್ ಆಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿದೆ ಎನ್ನುತ್ತಿದ್ದಾರೆ. ಪ್ರಾಯೋಗಿಕ ಹಂತದಲ್ಲಿರುವ ಈ ಹೆಲ್ಮೆಟ್‌ನ್ನು ವಡೋದರ ಟ್ರಾಫಿಕ್ ಪೊಲೀಸರು ಬಳಸಿ ಮೆಚ್ಚುಗೆ ಸೂಚಿಸಿದ್ದಾರೆ.

ಪೊಲೀಸರ ಎಸಿ ಹೆಲ್ಮೆಟ್ ಕುರಿತು ಸಾಮಾಜಿಕ ಮಾಧ್ಯಮಗಳಲ್ಲೂ ಭಾರಿ ಚರ್ಚೆಯಾಗುತ್ತಿದೆ. ಬಿಸಿಲಿನ ಬೇಗೆ ತಡೆಯಲು ಇದು ಅತ್ಯುತ್ತಮ ಹೆಲ್ಮೆಟ್. ಈ ಹೆಲ್ಮೆಟ್ ಪೊಲೀಸರು ಹಾಗೂ ಬಿಸಿಲಿನಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೆ ನೆರವಾಗಲಿದೆ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!