FOOD | ರೆಸ್ಟೋರೆಂಟ್‌ ಶೈಲಿಯ ಪನೀರ್‌ ಬುರ್ಜಿ ಗ್ರೇವಿ ರೆಸಿಪಿ ಇಲ್ಲಿದೆ, ಇಂದೇ ನಿಮ್ಮ ಮನೆಯವರಿಗೆ ಮಾಡಿಕೊಡಿ..

ಪನ್ನೀರ್ – 300 ಗ್ರಾಂ
ಈರುಳ್ಳಿ – 1
ಟೊಮೆಟೋ – 2
ಕಡಲೇಹಿಟ್ಟು – 2 ಚಮಚ
ಅರಿಶಿಣಪುಡಿ- ಅರ್ಧ ಚಮಚ
ಬ್ಲಾಕ್ ಸಾಲ್ಟ್ – ಅರ್ಧ ಚಮಚ
ಕಸೂರಿ ಮೇಥಿ – 1 ಚಮಚ
ದನಿಯಾಪುಡಿ – 1 ಚಮಚ
ಅಚ್ಚಖಾರದಪುಡಿ – 1 ಚಮಚ
ಗರಂಮಸಾಲ – 1 ಚಮಚ
ಮೊಸರು – ಮುಕ್ಕಾಲು ಬಟ್ಟಲು
ಹಾಲು – ಕಾಲು ಬಟ್ಟಲು
ತುಪ್ಪ – 4 ಚಮಚ
ಬೆಣ್ಣೆ – 2 ಚಮಚ
ಕಾಶ್ಮೀರಿ ಚಿಲ್ಲಿ ಪೌಡರ್ – 1 ಚಮಚ
ಜೀರಿಗೆ – ಅರ್ಧ ಚಮಚ
ಹಸಿಮೆಣಸಿನಕಾಯಿ – 3
ಶುಂಠಿ – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ನಿಂಬೆರಸ – ಸ್ವಲ್ಪ
ಉಪ್ಪು – ರುಚಿಗೆ ತಕ್ಕಷ್ಟು

ಮಾಡುವ ವಿಧಾನ 

ಮೊದಲಿಗೆ ಒಲೆಯ ಮೇಲೆ ಪ್ಯಾನ್ ಇಟ್ಟು ಇದಕ್ಕೆ 2 ಚಮಚ ಕಡಲೇಹಿಟ್ಟನ್ನು ಹಾಕಿ ಲೋ ಫ್ಲೇಮ್ ನಲ್ಲಿ ಸುವಾಸನೆ ಬರುವವರೆಗೂ ಹುರಿದುಕೊಳ್ಳಿ. ಕಡಲೇಹಿಟ್ಟು ಸ್ವಲ್ಪ ಬಣ್ಣ ಬದಲಾಗುತ್ತಿದ್ದಂತೆ ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ.

ಹುರಿದ ಕಡಲೇಹಿಟ್ಟಿಗೆ ಅರಿಶಿಣಪುಡಿ, ಬ್ಲಾಕ್ ಸಾಲ್ಟ್, ಕಸೂರಿ ಮೇಥಿಯನ್ನು ಹಾಕಿ ಪೌಡರ್ ರೀತಿ ಮಾಡಿ ಹಾಕಿಕೊಳ್ಳಬೇಕು. ಹಾಗೇ ಇದಕ್ಕೆ ದನಿಯಾಪುಡಿ, ಅಚ್ಚಖಾರದಪುಡಿ, ಗರಂಮಸಾಲ, ಮೊಸರು, ಕಾಲು ಕಪ್ ಹಾಲು ಹಾಕಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ಇದೀಗ ಒಲೆಯ ಮೇಲೆ ಪ್ಯಾನ್ ಇಟ್ಟು ಇದಕ್ಕೆ 2 ಚಮಚ ತುಪ್ಪ ಹಾಕಿ. ತುಪ್ಪ ಕರಗಿದ ನಂತರ, 1 ಚಮಚ ಕಾಶ್ಮೀರಿ ಚಿಲ್ಲಿ ಪೌಡರ್ ಅನ್ನು ಹಾಕಿ ಸುಮ್ಮನೆ ಬೆಚ್ಚಗೆ ಮಾಡಿ ಸ್ಟೌವ್ ಆಫ್ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮಸಾಲೆ ಮಿಶ್ರಣದ ಜೊತೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಬೇಕು.

ಒಲೆಯ ಮೇಲೆ ಮತ್ತೊಂದು ಪ್ಯಾನ್ ಇಟ್ಟು ಇದಕ್ಕೆ 2 ಚಮಚ ತುಪ್ಪ, 2 ಚಮಚ ಬೆಣ್ಣೆಯನ್ನು ಹಾಕಿ ಬಿಸಿ ಮಾಡಿಕೊಳ್ಳಬೇಕು. ನಂತರ ಅದಕ್ಕೆ ಜೀರಿಗೆ, ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಸ್ವಲ್ಪ ಹಾಕಿ ಗೋಲ್ಡನ್ ಕಲರ್ ಬರುವವರೆಗೂ ಫ್ರೈ ಮಾಡಿಕೊಳ್ಳಬೇಕು. ನಂತರ 2 ಸಣ್ಣದಾಗಿ ಹಚ್ಚಿರುವ ಟೊಮೆಟೋ ಹಾಕಿ ಫ್ರೈ ಮಾಡಬೇಕು.

ಟೊಮೆಟೋ ಮೆತ್ತೆಗೆ ಆದ ಮೇಲೆ ಮಸಾಲೆ ಮಿಶ್ರಣವನ್ನು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿಸೊಪ್ಪು ಹಾಕಿ ಬೇಯಿಸಬೇಕು. 3 ನಿಮಿಷದ ಬಳಿಕ ಕಾಲು ಕಪ್ ಬಿಸಿನೀರನ್ನು ಹಾಕಿ ಕುದಿಸಿಕೊಳ್ಳಬೇಕು.

ಮಸಾಲೆ ಕುದಿ ಬರುವಾಗ ಪನ್ನೀರ್ ತುರಿಯನ್ನು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ಬಿಸಿನೀರನ್ನು ಹಾಕಿ ಕುದಿಸಿಕೊಂಡು ಕೊನೆಯಲ್ಲಿ ನಿಂಬೆರಸ ಹಾಕಿದರೆ ಸ್ಪೆಷಲ್ ಪಂಜಾಬಿ ಸ್ಟೈಲ್ ಪನ್ನೀರ್ ಬುರ್ಜಿ ಗ್ರೇವಿ ಸವಿಯಲು ಸಿದ್ಧ.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!