ಮೇಘ, ಬೆಂಗಳೂರು:
ಹೈನುಗಾರಿಕೆ ಇತ್ತೀಚೆಗೆ ಅತ್ಯಂತ ಲಾಭದಾಯಕ ಉದ್ಯಮವಾಗಿದೆ. ರೈತರು ಹೈನುಗಾರಿಕೆಯ ಮೂಲಕ ತಮ್ಮ ಆದಾಯವನ್ನು ಪೂರೈಸುತ್ತಾರೆ. ಅಂತಹ ಒಂದು ಯಶೋಗಾಥೆಯನ್ನು ನಿಮ್ಮ ಮುಂದಿಡುತ್ತಿದ್ದೇವೆ.
ಇಲ್ಲೊಬ್ಬ ಪಶುಪಾಲಕನ ಬಳಿ 5 ಲಕ್ಷ ರೂ. ಮೌಲ್ಯದ ಎಮ್ಮೆಯಿದ್ದು ಅದನ್ನು ಸಾಕಲು ತಿಂಗಳಿಗೆ ಬರೋಬ್ಬರಿ 35 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ. ಹಾಗಾದ್ರೆ ಆ ಎಮ್ಮೆಯಿಂದ ಆತನಿಗೆ ಸಿಗುವ ಆದಾಯವಾದ್ರೂ ಎಷ್ಟು ಎಂಬುದು ಗೊತ್ತಾ?
ಗುಜರಾತ್ ನ ಬೋಟಡ್ ಜಿಲ್ಲೆಯ ರಾಣಪುರ ತಾಲೂಕಿನ ದೇವಲ್ಕಿ ಗ್ರಾಮದ ನಿವಾಸಿಯಾದ ಸಂಜಯ್‌ಭಾಯ್ ಎಂಟನೇ ತರಗತಿವರೆಗೆ ಓದಿದ್ದಾರೆ, ಒಟ್ಟು ಮೂರು ಎಮ್ಮೆಗಳನ್ನು ಸಾಕಿಕೊಂಡಿದ್ದಾರೆ. 5 ಲಕ್ಷ ಮೌಲ್ಯದ ಎಮ್ಮೆ ಹೊಂದಿದ್ದಾರೆ. ಈ ಎಮ್ಮೆ ದಿನಕ್ಕೆ 26 ಲೀಟರ್ ಹಾಲು ಉತ್ಪಾದಿಸುತ್ತದೆ ಮತ್ತು ಎಮ್ಮೆಯ ನಿರ್ವಹಣೆಗೆ ತಿಂಗಳಿಗೆ 35,000 ರೂ. ಬೇಕಾಗುತ್ತದೆ.
ಗುಜರಾತ್‌ನ ಬಹುತೇಕ ಜಾನುವಾರು ಸಾಕಣೆದಾರರು ಅದರಿಂದ ಲಕ್ಷಗಟ್ಟಲೆ ಆದಾಯ ಗಳಿಸುತ್ತಾರೆ. ಉತ್ತಮ ತಳಿಯ ದನಗಳಿಂದ ಹೆಚ್ಚಿನ ಆದಾಯ ಗಳಿಸುತ್ತಾರೆ.
ಬೋಟಡ್ ಜಿಲ್ಲೆಯ ರಾಣಪುರ ತಾಲೂಕಿನ ದೇವಲ್ಕಿ ಗ್ರಾಮದ ಸಂಜಯ್‌ಭಾಯ್ 5 ಲಕ್ಷ ರೂಪಾಯಿ ಮೌಲ್ಯದ ಎಮ್ಮೆಯನ್ನು ಸಾಕುತ್ತಿದ್ದು, ದಿನಕ್ಕೆ 2000 ರೂಪಾಯಿ ಹಾಲು ಉತ್ಪಾದಿಸುತ್ತಿದ್ದಾರೆ.
ಈ ಎಮ್ಮೆಯ ಬೆಲೆ 5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಈ ಎಮ್ಮೆ ದಿನಕ್ಕೆ 24 ರಿಂದ 26 ಲೀಟರ್ ಹಾಲು ನೀಡುತ್ತದೆ. ಮಾರುಕಟ್ಟೆ ಮತ್ತು ಡೈರಿ ಫಾರ್ಮ್‌ಗಳಲ್ಲಿ ಪ್ರತಿ ಲೀಟರ್‌ಗೆ 60 ರಿಂದ 80 ರೂ.ವರೆಗಿನ ಬೆಲೆಯಲ್ಲಿ, ಸಂಜಯ್‌ಭಾಯ್ ಹಾಲು ಉತ್ಪಾದನೆಯಿಂದ ತಿಂಗಳಿಗೆ 60,000 ರೂ. ಸಂಪಾದನೆ ಮಾಡುತ್ತಾರೆ.
ಸಂಜಯ್‌ಭಾಯ್ ತಿಂಗಳಿಗೆ 30,000 ರಿಂದ 35,000 ರೂ. ಎಮ್ಮೆಗಳಿಗೆ ಖರ್ಚು ಮಾಡುತ್ತಾರೆ. ಆದ್ರೂ ಅವರು ತಿಂಗಳಿಗೆ 25,000 ರೂಪಾಯಿ ನಿವ್ವಳ ಲಾಭವನ್ನು ಪಡೆಯುತ್ತಿದ್ದಾರೆ.
ಅದಕ್ಕೆ ಅಲ್ವಾ ಹೇಳೋದು, ಓದಿದವನಿಗೆ ಒಂದು ದಾರಿಯಾದ್ರೆ.. ಏನೂ ಓದದೇ ಜೀವನ ನಡೆಸುವವನಿಗೆ ನೂರು ದಾರಿ ಅಂತ.