ಸಾಮಾಗ್ರಿಗಳು
ಹೆಸರುಕಾಳು ಒಂದು ಕಪ್
ಕಡ್ಲೆಕಾಳು ಒಂದು ಕಪ್
ಶೇಂಗಾ ಒಂದು ಹಿಡಿ
ಕಡ್ಲೆಬೇಳೆ ಒಂದು ಹಿಡಿ
ಮೆಂತ್ಯೆ ಎರಡು ಸ್ಪೂನ್
ಉದ್ದಿನಬೇಳೆ ಎರಡು ಸ್ಪೂನ್
ಅಕ್ಕಿ ಒಂದು ಕಪ್
ಮಾಡುವ ವಿಧಾನ
ಮೊದಲು ಎಲ್ಲ ಕಾಳು ಬೇಳೆಗಳು, ಅಕ್ಕಿಯನ್ನು ನೀರಿಗೆ ಹಾಕಿ ಚೆನ್ನಾಗಿ ತೊಳೆಯಿರಿ
ನಂತರ ಇದನ್ನು ಒಂದು ರಾತ್ರಿ ನೆನೆಯಲು ಬಿಡಿ
ಮರುದಿನ ಇದಕ್ಕೆ ಶುಂಠಿ, ಹಸಿಮೆಣಸು ಹಾಗೂ ಉಪ್ಪು ಹಾಕಿ ರುಬ್ಬಿ
ಕಾದ ಹೆಂಚಿಗೆ ಹಾಕಿ ಎರಡೂ ಕಡೆ ಬೇಯಿಸಿ ನಿಮ್ಮಿಷ್ಟದ ಪಲ್ಯದ ಜೊತೆ ಸೇವಿಸಿ