ಈ ಸಂಸ್ಥೆ ವಾರ್ಷಿಕವಾಗಿ ಉತ್ಪಾದನೆ ಮಾಡಲಿದೆ 5 ಮಿಲಿಯನ್‌ ಎಲೆಕ್ಟ್ರಿಕ್‌ ಬೈಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ವಿದ್ಯತ್‌ ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚಾದ ಹಾಗೆ ವಾಹನಾ ತಯಾರಿಕಾ ಸಂಸ್ಥೆಗಳು ಕೂಡ ಉತ್ಪಾದನೆಯನ್ನು ಹೆಚ್ಚಿಸುತ್ತಿದೆ.
ಕೇಂದ್ರ ಸರ್ಕಾರ ಕೂಡ ದೇಶದಲ್ಲಿ ಆತ್ಮನಿರ್ಭರತೆ ಹೆಚ್ಚಿಸಲು ಮೇಡ್‌ ಇನ್‌ ಇಂಡಿಯಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಎರಡೂ ಯೋಜನೆಗಳಿಗೆ ಸಾಥ್‌ ನೀಡುವಂತೆ ಇದೆ ಹೀರೋ ಎಲೆಕ್ಟ್ರಿಕ್‌ ನ ಕಾರ್ಯವೈಕರಿ. ಇದೀಗ ಹೀರೋ ಎಲೆಕ್ಟ್ರಿಕ್‌ ಭಾರತದಲ್ಲಿ ವಾರ್ಷಿಕವಾಗಿ 5 ಮಿಲಿಯನ್‌ ಎಲೆಕ್ಟ್ರಿಕ್‌ ಬೈಕ್‌ ಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು ತೀರ್ಮಾನಿಸಿದೆ.
ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ಸಂಸ್ಥೆಗೆ ಬರೋಬ್ಬರಿ 1,500 ಕೋಟಿ ರೂ. 2,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.
ದೇಶದ ಪಶ್ಚಿಮ ಹಾಗೂ ದಕ್ಷಿಣ ಭಾಗಗಳಲ್ಲಿ ಎರಡು ಗ್ರೀನ್‌ ಫೀಲ್ಡ್‌ ಕಾರ್ಖಾನೆಗಳನ್ನು ಸ್ಥಾಪಿಸಲಿದೆ. 2025 ರ ವೇಳೆಗೆ ಭಾರತದಲ್ಲಿ ದ್ವಿಚಕ್ರ ವಾಹನ ಮಾರುಕಟ್ಟೆಯ ಶೇ.30ರಷ್ಟು ಕೇವಲ ವಿದ್ಯುತ್‌ ಚಾಲಿತ ವಾಹನಗಳಿಂದ ಕೂಡಿರುತ್ತದೆ ಎಂದು ಹೀರೋ ಎಲೆಕ್ಟ್ರಿಕ್‌ ನ ಎಂಡಿ ನವೀನ್‌ ಮುಂಜಾಲ್‌ ತಿಳಿಸಿದ್ದಾರೆ.
ಮುಂದಿನ ಹಲವು ವರ್ಷಗಳಲ್ಲಿ ಮಾರುಕಟ್ಟೆಯಲ್ಲಿ ಕನಿಷ್ಠ ಮೂರನೇ ಒಂದು ಭಾಗದಷ್ಟು ಮಾರುಕಟ್ಟೆಯನ್ನು ಹಿಡಿದಿಟ್ಟುಕೊಳ್ಳುವ ವಿಶ್ವಾಸವಿದೆ ಎಂದು ಮುಂಜಾಲ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!