ಅರೇ…ಅರೇ ಜಗಳ ಮಾಡ್ಬೇಡಿ: ಮರಿ ಆನೆಗಳ ಫೈಟ್ ಬಿಡಿಸಿದ ಹಿರಿಯಾನೆ! ವಿಡಿಯೋ ವೈರಲ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಾಮಾನ್ಯವಾಗಿ ನಾವು ಪ್ರಾಣಿಗಳು ಆಟವಾಡುತ್ತಿರುವ ದೃಶ್ಯ ನೋಡಿರುತ್ತೇವೆ. ಅವುಗಳನ್ನು ನೋಡುವುದೇ ಒಂದು ರೀತಿಯ ಖುಷಿ. ಅದೇ ಪ್ರಾಣಿಗಳು ಜಗಳವಾಡುವುದು ನೋಡಿದ್ರೆ ಹೇಗಿರುತ್ತೆ ಹೇಳಿ..

ನಾವು ಮಕ್ಕಳು ಮನೆಯಲ್ಲಿ ಜಗಳವಾಡುತ್ತಿರುವುದು ನೋಡಿರುತ್ತೇವೆ , ಆ ಬಳಿಕ ದೊಡ್ಡವರು ಬಂದು ಇಬ್ಬರ ಜಗಳ ಬಿಡುಸುತ್ತಾರೆ. ಅದೇ ರೀತಿ ಇಲ್ಲಿ ಆನೆಮರಿಗಳೆರಡು (Elephant calf) ಪರಸ್ಪರ ಕಾದಾಡುತ್ತಿರುವ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (IFS) ಅಧಿಕಾರಿ ಪರ್ವಿನ್ ಕಸ್ವಾನ್ (Parveen Kaswan) ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇದಕ್ಕೆ ಶೀರ್ಷಿಕೆ ಕೂಡ ನೀಡಿದ್ದಾರೆ. “ಸೋದರ ಸಂಬಂಧಿಗಳು ಜಗಳವಾಡುವಾಗ ಹಿರಿಯರು ಮಧ್ಯಪ್ರವೇಶಿಸಬೇಕು” ಎಂದು ಬರೆದಿಕೊಂಡಿದ್ದಾರೆ.

23 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಆನೆಮರಿಗಳೆರಡು ಪರಸ್ಪರ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಕಾದಾಡುತ್ತಿವೆ. ಇದನ್ನು ನೋಡಿದ ಹಿರಿಯಾನೆಗಳು ಅವುಗಳತ್ತ ಆಗಮಿಸಿ ಎರಡು ಆನೆ ಮರಿಗಳನ್ನು ದೂರ ದೂರ ಮಾಡುತ್ತವೆ.

ದೊಡ್ಡದಾದ ಕಾಡಿನಲ್ಲಿ ಆನೆಗಳ ದೊಡ್ಡ ಹಿಂಡಿದೆ. ಒಂದೆಡೆ ಹಿರಿಯಾನೆಗಳೆಲ್ಲಾ ಗುಂಪಿನಲ್ಲಿದ್ದುಕೊಂಡು ಏನೋ ಮಾಡುತ್ತಿದ್ದರೆ, ಇದೆರಡು ಆನೆ ಮರಿಗಳು ಒಬ್ಬರನ್ನೊಬ್ಬರು ತಳ್ಳಾಡುತ್ತಿವೆ.

ಮೊದಲಿಗೆ ಪರಸ್ಪರ ಅಭಿಮುಖವಾಗಿ ನಿಂತಿರುವ ಪುಟ್ಟ ಆನೆಗಳು ಒಬ್ಬರನ್ನೊಬ್ಬರು ತಳ್ಳಿಕೊಂಡು ಒಂದು ಆನೆ ಹಿಮ್ಮುಖವಾಗಿ ಹೆಜ್ಜೆ ಹಾಕುತ್ತಿದ್ದರೆ ಅದಕ್ಕಿಂತ ಸ್ವಲ್ಪ ಸಣ್ಣ ಇರುವ ಆನೆ ಅದನ್ನು ತಳ್ಳುತ್ತಾ ಸಾಗುತ್ತಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಉಲ್ಟಾ ಆಗಿದ್ದು, ಹಿಂದೆ ಹಿಂದೆ ಹೋಗಿದ್ದ ದೊಡ್ಡಾನೆ ಮರಿ ಪುಟ್ಟಾನೆಯನ್ನು ಸೀದಾ ವೇಗವಾಗಿ ತಳ್ಳುತ್ತಾ ಸಾಗಿದೆ. ಇದನ್ನು ಗಮನಿಸಿದ ಆನೆಗಳ ಹಿಂಡಿನಲ್ಲಿದ್ದ ದೊಡ್ಡ ಆನೆ ಮಧ್ಯೆ ಬಂದು ಎರಡು ಮರಿಗಳನ್ನು ಬಿಡಿಸಿ ಜಗಳ ಮಾಡದಂತೆ ದೂರ ಓಡಿಸಿವೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!