ಪ್ರಧಾನಿ ಮೋದಿ ನೇತೃತ್ವ ಭಾರತ ತಾಕತ್ ವಾಲಾ ದೇಶ: ಯುಪಿ ಸಿಎಂ ಯೋಗಿ ಆದಿತ್ಯನಾಥ್

ಹೊಸದಿಗಂತ ವರದಿ, ವಿಜಯಪುರ:

ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಾರತ ತಾಕತ್ ವಾಲಾ ದೇಶವಾಗಿದ್ದು, ಹೊಸ ಹೊಸ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು.

ಜಿಲ್ಲೆಯ ಬಸವನಬಾಗೇವಾಡಿ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್, ಜೆಡಿಎಸ್ ವಿಭಜನೆ ಮಾಡುತ್ತವೆ, ವಿಕಾಸ ಮಾಡುವುದಿಲ್ಲ. ಅವು ಭ್ರಷ್ಟಾಚಾರ ಮಾಡುತ್ತವೆ. ಅವರಿಗೆ ನೀತಿ, ನೀಯತ್ತು ಗುರಿ ಇಲ್ಲ. ಪ್ರಧಾನಿ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ, ಸಬ್ ಕಾ ವಿಶ್ವಾಸ ಎಂಬ ನಮ್ಮ ಗುರಿ ಬಹಳ ಸ್ಪಷ್ಟವಾಗಿದೆ ಎಂದರು.
1947ರಲ್ಲಿ ಭಾರತ ತುಂಡಾಗಿದೆ. ಭಾರತದ ಒಂದು ತುಂಡನ್ನು ಯಾರಿಗೂ ಕೊಡಲು ಸಾಧ್ಯವಿಲ್ಲ. ಜಗತ್ತಿನ 20 ದೊಡ್ಡ ದೇಶಗಳಲ್ಲಿ ಜಿ 20 ದೇಶಗಳ ನೇತೃತ್ವ ವಹಿಸುತ್ತಿದೆ. ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲಿಷ್ಠವಾಗಲು, ಐಟಿಬಿಟಿಯಲ್ಲಿ ಕರ್ನಾಟಕದ ಬೆಂಗಳೂರು ಕಾರಣವಿದೆ ಎಂದರು.

ಬಸವೇಶ್ವರರ ಸಂದೇಶ ಸಮಾನತೆಯ ಸಾರುವುದಾಗಿತ್ತು, ಕಾಯಕವೇ ಕೈಲಾಸ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕರ್ನಾಟಕದ ಬಿಜೆಪಿ ಆ ಕೆಲಸ ಮಾಡುತ್ತಿದೆ. ಕರ್ನಾಟಕ ಹಾಗೂ ಉತ್ತರ ಪ್ರದೇಶಕ್ಕೆ ಸಾವಿರಾರು ವರ್ಷಗಳಿಂದ ಮಿತ್ರ ಸಂಬಂಧ ಇದೆ. ಪ್ರಧಾನಮಂತ್ರಿಗಳ ಏಕ್ ಭಾರತ ಸೇತು ಭಾರತ ಎಂಬುದಕ್ಕೆ ಉದಾಹರಣೆ ಕರ್ನಾಟಕ ಹಾಗೂ ಉತ್ತರ ಪ್ರದೇಶ ಆಗಿವೆ. ಆಂಜನೇಯ ಜನಿಸಿದ್ದು, ಇದೇ ನೆಲದಲ್ಲಿ, ಹನುಮಾನ ಚಾಲಿಸ್ ಇಡಿ ದೇಶ ಪಠಣ ಮಾಡುತ್ತೆ. ನನಗೆ ಇಡಿ ದೇಶ ಸಂತರ ಆಶೀರ್ವಾದಿಂದ ಡಬಲ್ ಇಂಜಿನ್ ಸರ್ಕಾರದ ಪರವಾಗಿ ಮತ ಕೇಳಲು ಬಂದಿದ್ದೇನೆ ಎಂದರು.

ಇಲ್ಲಿನ ನೇತಾ ಎಸ್.ಕೆ. ಬೆಳ್ಳುಬ್ಬಿ ಹಿರಿಯರು ಇದ್ದಾರೆ. ನೀವೆಲ್ಲರೂ ಅವರನ್ನು ಗೆಲ್ಲಿಸಬೇಕು. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಕನ್ನಡದಲ್ಲಿ ಭಾಷಣ ಮುಗಿಸಿದರು.

ಅಭ್ಯರ್ಥಿ ಎಸ್.ಕೆ. ಬೆಳ್ಳುಬ್ಬಿ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮತ್ತಿತರರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!