ಹಾಸನದ ಚೆಕ್ ಪೋಸ್ಟ್ ಗಳಲ್ಲಿ ಹೈ ಅಲರ್ಟ್: ತಪಾಸಣೆ ವೇಳೆ ದಾಖಲೆ ಇಲ್ಲದ 3.8 ಲಕ್ಷ ಹಣ ಜಪ್ತಿ

ಹೊಸದಿಗಂತ , ಹಾಸನ:

ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂಬಂಧ ಕಾರ್ಯನಿರ್ವಹಿಸುತ್ತಿರುವ ಮೈಲನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು‌ ನಾಲ್ಕು ವಾಹನಗಳಲ್ಲಿ ದಾಖಲೆಯಿಲ್ಲದೆ ಅನಾಧಿಕೃತವಾಗಿ ಸಾಗಿಸುತ್ತಿದ್ದ 3,08,000 ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಮೈಲನಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಅಧಿಕಾರಿಗಳು ವಾಹನಗಳನ್ನು ತಪಾಸಣೆ ನಡೆಸಿದ ವೇಳೆ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 3,08,000 ವಶಪಡಿಸಿಕೊಂಡಿದ್ದಾರೆ.

ನಾಲ್ಕು ವಾಹನಗಳಲ್ಲಿ ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ‌ ನಾಗೇಶ್ ಎಂಬುವವರಿಗೆ ಸೇರಿದ KA-13 -C-4812 ಬೊಲೆರೋ ವಾಹನದಲ್ಲಿ 70,000 ನಗದು, ಷಣ್ಮುಖಪ್ಪ ಎಂಬುವವರಿಗೆ ಸೇರಿದ KA-02-MM-5097 ಒಮಿನಿ ಕಾರು 74,000 ನಗದು, ನೂರುಲ್ಲಾ ಎಂಬುವವರಿಗೆ KA-18-A-8599 ನಂಬರ್‌ನ ಬೊಲೆರೋ ಪಿಕಪ್ ವಾಹನದಲ್ಲಿ 70,000 ನಗದು, ದಾದಾಪೀರ್ ಎಂಬುವವರಿಗೆ ಸೇರಿದ KA13-B-5889 ಗೂಡ್ಸ್ ವಾಹನ 94,000 ನಗದು ಒಟ್ಟು 3,08,000 ರೂ ನಗದನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!