Wednesday, October 5, 2022

Latest Posts

ಹೈವೋಲ್ಟೇಜ್ ಪಂದ್ಯ: ಪಾಕ್ ವಿರುದ್ಧ ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ರಿಷಬ್ ಪಂತ್ ಬದಲು ದಿನೇಶ್ ಕಾರ್ತಿಕ್ ಆಯ್ಕೆ ಮಾಡಲಾಗಿದೆ. ಇನ್ನು ಭುವನೇಶ್ವರ್ ಕುಮಾರ್ ಜೊತೆ ಅವೇಶ್ ಖಾನ್ ಕೂಡ ವೇಗದ ಸಾರಥ್ಯ ವಹಿಸಿಕೊಂಡಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕದಲ್ಲೂ ಕೆಲ ಬದಲಾವಣೆಗಳಾಗಿದೆ. ದಿನೇಶ್ ಕಾರ್ತಿಕ್ ಗೇಮ್ ಫಿನೀಶರ್ ಆಗಿ ಬಡ್ತಿ ಪಡೆದಿದ್ದಾರೆ. ಇಷ್ಟೇ ಅಲ್ಲ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಹೊಸ ಹಾಗೂ ಅನುಭವಿ ಬೌಲಿಂಗ್ ಮಿಶ್ರಮ ಟೀಂ ಇಂಡಿಯಾಗೆ ನೆರವಾಗಲಿದೆ. ಇತ್ತ ಪಾಕಿಸ್ತಾನ ತಂಡಕ್ಕೆ ಶಹೀನ್ ಆಪ್ರಿದಿ ಅನುಪಸ್ಥಿತಿ ಕಾಡಲಿದೆ. ನಾಯಕ ಬಾಬರ್ ಅಜಮ್ ಹೊರತುಪಡಿಸಿದರೆ ಇತರರಿಂದ ಸ್ಥಿರ ಬ್ಯಾಟಿಂಗ್ ಪ್ರದರ್ಶನ ಮೂಡಿಬರುತ್ತಿಲ್ಲ. ಇದು ತಲೆನೋವಾಗಿದೆ. ಮೊಹಮ್ಮದ್ ವಾಸಿಮ್ ಅಲಭ್ಯತೆ ಕೂಡ ಪಾಕ್ ತಂಡಕ್ಕೆ ತೀವ್ರ ಹಿನ್ನಡೆ ತಂದಿದೆ. ಆದರೆ ಹಸನ್ ಆಲಿ ತಂಡ ಸೇರಿಕೊಂಡಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!