ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳೇ ಕಳೆದಿದ್ದರೂ, ಜನಪ್ರಿಯ ಗ್ಯಾರೆಂಟಿಗಳು ಜನರ ಕೈಗೆ ಸಿಲುಕಿಲ್ಲ. ಎರಡು, ಮೂರು ದಿನಗಳಿಂದ ಮೀಟಿಂಗ್ ನಡೆಯುತ್ತಲೇ ಇದ್ದು, ಇಂದಾದರೂ ಗ್ಯಾರೆಂಟಿಗಳ ಘೋಷಣೆಯಾಗಲಿದೆಯಾ ಎನ್ನುವ ಪ್ರಶ್ನೆ ಮತದಾರರಲ್ಲಿ ಮೂಡಿದೆ.
ಇಂದು ಮಹತ್ವದ ಗ್ಯಾರೆಂಟಿಗಳು ಘೋಷಣೆಯಾಗುವ ಸಾಧ್ಯತೆಗಳಿವೆ. ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದ ಸಭೆ ಕರೆದಿದ್ದು, ಹೈವೋಲ್ಟೇಜ್ ಸಭೆಯಲ್ಲಿ ಎಲ್ಲ ಗ್ಯಾರೆಂಟಿಗಳು ಜಾರಿಯಾಗುವ ಸಾಧ್ಯತೆ ಇದೆ. ಈಗಾಗಲೇ ಮಹಿಳೆಯರಿಗೆ ಉಚಿತ ಪ್ರಯಾಣ ಎನ್ನುವ ಗ್ಯಾರೆಂಟಿ ಘೋಷಣೆಯಾಗಿದ್ದು, ಇನ್ನುಳಿದ ನಾಲ್ಕು ಗ್ಯಾರೆಂಟಿಗಳಿಗಾಗಿ ಜನ ಕಾಯುತ್ತಿದ್ದಾರೆ.
ಎಲ್ಲಾ ಇಲಾಖೆಗಳ ಜತೆ ಸಿದ್ದು ಚರ್ಚೆ ನಡೆಸಿದ್ದು, ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ. ಗ್ಯಾರೆಂಟಿ ಘೋಷಣೆಯಾಗುವುದಂತೂ ಪಕ್ಕಾ ಆಗಿದ್ದು, ಯಾವಾಗಿನಿಂದ ಜಾರಿಗೆ ಬರಲಿವೆ ಎಂದು ಜನರು ಕಾಯುತ್ತಿದ್ದಾರೆ. ಇಂದು 11 ಗಂಟೆಗೆ ಮೀಟಿಂಗ್ ಆರಂಭವಾಗಲಿದ್ದು, ಶೀಘ್ರದಲ್ಲೇ ಜನರಿಗೆ ಸಿಹಿ ಸುದ್ದಿ ಸಿಗಲಿದೆ.