ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ನರೇಶ್ – ಪವಿತ್ರಾ ಲೋಕೇಶ್ ಜೋಡಿ ವೈರಲ್ ಆಗಿದ್ದು ಗೊತ್ತೇ ಇದೆ. ಅವರ ವಿರುದ್ಧ ಟ್ರೋಲ್ ಗಳು ಬಂದಿದ್ದು ಮಾತ್ರವಲ್ಲದೆ, ಜೊತೆಯಾಗಿ ಮತ್ತೆ ಮದುವೆ ಎಂಬ ಸಿನಿಮಾ ಮಾಡಿ ರಿಲೀಸ್ ಮಾಡಿದ್ದಾರೆ. ಆದರೆ ಈ ಸಿನಿಮಾ ಅಷ್ಟಾಗಿ ಆಡದಿದ್ದರೂ ನರೇಶ್ ಸಿನಿಮಾವನ್ನು ಚೆನ್ನಾಗಿ ಪ್ರಚಾರ ಮಾಡಿದರು. ನೆಟ್ಟಿಗರು ಕೂಡ ಈ ಚಿತ್ರವನ್ನು ಸಾಕಷ್ಟು ಟ್ರೋಲ್ ಮಾಡಿದ್ದಾರೆ.
ಈ ವಯಸ್ಸಿನಲ್ಲಿ ಇವರಿಬ್ಬರೂ ಪ್ರೀತಿಸಿ ಮದುವೆಯಾಗೋದೆ ಅಂತ ಟ್ರೋಲ್ ಮಾಡಿದ್ರು, ಆದ್ರೆ ಈಗ ಒಂದಲ್ಲಾ ಒಂದು ವಿಚಾರಕ್ಕೆ ನೆಟ್ಟಿಗರು ಇಬ್ಬರಿಗೂ ಶುಭಾಶಯ ಕೋರುತ್ತಿದ್ದಾರೆ. ಪವಿತ್ರಾ ಲೋಕೇಶ್ ಈಗಲೂ ಓದುತ್ತಿದ್ದಾರೆ. ಈಗಾಗಲೇ ಪಿಜಿ ಮಾಡಿರುವ ಪವಿತ್ರಾ ಅವರಿಗೆ ಮಾತೃಭಾಷೆ ಕನ್ನಡದಲ್ಲಿ ಪಿಎಚ್‌ಡಿ ಮಾಡಬೇಕೆಂಬ ಆಸೆ ಸದಾ ಇತ್ತು. ಇದಕ್ಕೆ ನರೇಶ್ ಕೂಡ ಒಪ್ಪಿಗೆ ಸೂಚಿಸಿದ್ದರಿಂದ ಪವಿತ್ರಾ ಲೋಕೇಶ್ ಇತ್ತೀಚೆಗೆ ಕರ್ನಾಟಕದ ಬಳ್ಳಾರಿಗೆ ಹೋಗಿ ಪಿಎಚ್ ಡಿ ಪ್ರವೇಶ ಪರೀಕ್ಷೆ ಬರೆದಿದ್ದರು.
ಸ್ವತಃ ನರೇಶ್ ಪವಿತ್ರಾರನ್ನು ಪರೀಕ್ಷೆ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಪರೀಕ್ಷೆ ಬರೆಯುವವರೆಗೆ ಆಚೆಯೇ ಕಾದಿದ್ದಾರೆ. ಈ ಸುದ್ದಿ ವೈರಲ್ ಆಗಿದೆ. ಪವಿತ್ರಾ ಈ ವಯಸ್ಸಿನಲ್ಲಿ ಓದಿದ್ದಕ್ಕೆ ಮತ್ತು ನರೇಶ್ ಅವರಿಗೆ ಬೆಂಬಲ ನೀಡಿದ್ದಕ್ಕಾಗಿ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.