ವೇಗ ಪಡೆದುಕೊಂಡ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಕಾರ್ಯ: ದಿನಕ್ಕೆ 37 ಕಿ.ಮೀ ನಿರ್ಮಾಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶದಲ್ಲಿ ಸ್ಥಗಿತಗೊಂಡಿದ್ದ, ನಿಧಾನಗತಿಯಲ್ಲಿ ಸಾಗುತ್ತಿದ್ದ ಹಲವಾರು ಮೂಲಸೌಕರ್ಯಗಳ ನಿರ್ಮಾಣ ಕಾರ್ಯಗಳು ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ಅವಧಿಯಲ್ಲಿ ವೇಗ ಕಾಣುತ್ತಿವೆ.
ಇದಕ್ಕೆ ಉದಾಹರಣೆಯಂತೆ ಈಗ ಪ್ರಸ್ತುತ ಹಂತದಲ್ಲಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ 2014-15ಕ್ಕೆ ಹೋಲಿಸಿದರೆ ಈಗ ಮೂರು ಪಟ್ಟು ವೇಗ ಹೆಚ್ಚಾಗಿದೆ.
2014-15ರಲ್ಲಿ ದಿನಕ್ಕೆ ಸರಾಸರಿ 14 ಕಿ.ಮೀ ಇದ್ದ ನಿರ್ಮಾಣ ಕಾಮಗಾರಿ ಈಗ 37 ಕಿ.ಮೀಗೆ ಏರಿಕೆಯಾಗಿದೆ. 2014-15ರಲ್ಲಿ 4,410 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿತ್ತು, 2020-21ರಲ್ಲಿ 13,327 ಕಿ.ಮೀ ಮಾರ್ಗ ನಿರ್ಮಾಣವಾಗಿತ್ತು. ಪ್ರಸ್ತುತ ವರ್ಷ 2021-22ನೇ ವರ್ಷದ (ಡಿ.24ರವರೆಗೆ) 5,407 ಕಿ.ಮೀ ಹೆದ್ದಾರಿ ನಿರ್ಮಾಣವಾಗಿದೆ.
2014ರವರೆಗೆ ನಿರ್ಮಾಣವಾಗಿದ್ದ 91,287 ಕಿ.ಮೀ. ಹೆದ್ದಾರಿ ಈಗ ಕಳೆದ 7 ವರ್ಷಗಳಲ್ಲಿ ಶೇ.50ರಷ್ಟು ಹೆಚ್ಚಾಗಿಸಿದೆ. ಅಂದರೆ 1,41,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣವಾಗಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!