ಹಿಜಾಬ್ ವಿವಾದದ ಹಿಂದಿನ ಷಡ್ಯಂತ್ರ ಬಯಲಾಗಲಿ: ಶಾಸಕ ಡಾ. ಭರತ್ ಶೆಟ್ಟಿ

ಹೊಸದಿಗಂತ ವರದಿ,ಮಂಗಳೂರು:

ಕಾಲೇಜುಗಳಲ್ಲಿ ಹಿಜಾಬ್ ವಿವಾದ ಅಂತಾರಾಷ್ಟ್ರೀಯವಾಗಿ ಭಾರತದ ಘನತೆಗೆ ಧಕ್ಕೆ ತಂದಿಲ್ಲ. ಆದರೆ, ಇದುವರೆಗೆ ಕಲಿಕೆಯ ದೇಗುಲವೆಂದು ಎಲ್ಲರೂ ಭಾವಿಸಿರುವ ಶಾಲಾ ಕಾಲೇಜುಗಳಲ್ಲಿ ಹಿಜಾಬ್ ತಂತ್ರವನ್ನು ಹಣೆದು ಅಲ್ಪಸಂಖ್ಯಾತ ಸಮುದಾಯದವರನ್ನು ಶಿಕ್ಷಣದಿಂದ ದೂರ ಮಾಡಲು ಯತ್ನಿಸಿದವರನ್ನು ಮೊದಲು ಬಯಲಿಗೆಳೆದು ಜೈಲಿಗೆ ತಳ್ಳಬೇಕು ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ತಂತ್ರಕ್ಕೆ, ಕ್ರಿಯೆಗೆ ಪ್ರತಿಕ್ರಿಯೆಯಾಗಿ ಕೇಸರಿ ,ನೀಲಿ ಶಾಲು ಕಂಡು ಬಂತು. ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತವನ್ನು, ರಾಜ್ಯದಲ್ಲಿ ಬಿಜೆಪಿಯ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಸಹಿಸಲಾರದೆ ವಿದೇಶದಲ್ಲಿ ಮಾನ ಹರಾಜು ಹಾಕುವ ಯತ್ನ ಮಾಡಿ ವಿಫಲರಾಗಿದ್ದಾರೆ. ಚುನಾವಣೆಯ ದೃಷ್ಟಿಯಿಟ್ಟು ಈ ತಂತ್ರ ಮಾಡಿದ್ದರೆ, ಕಾಂಗ್ರೆಸ್, ಎಸ್‌ಡಿಪಿಐಗಳಿಗೆ ತಲೆ ಎತ್ತಲಾರದೆ ಮುಳುಗಿ ಹೋಗುತ್ತದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಕಿಡಿ ಕಾರಿದರು.
ಶಿಕ್ಷಣ ಕ್ಷೇತ್ರದಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂಬ ಪಶ್ಚಾತಾಪ ಇದೀಗ ಅಲ್ಪಸಂಖ್ಯಾತ ಸಮುದಾಯದಲ್ಲೇ ಕಂಡು ಬರುತ್ತಿದೆ. ನ್ಯಾಯಾಲಯದ ತೀರ್ಪು ಬಳಿಕ ಶಿಕ್ಷಣ ರಂಗ ಹಿಂದಿನಂತೆ ಸ್ವಚ್ಛವಾಗುತ್ತದೆ ಮಾತ್ರವಲ್ಲ ಮಹತ್ವದ ಬದಲಾವಣೆಯಾಗುವುದು ಖಚಿತ ಎಂದು ಭರತ್ ಶೆಟ್ಟಿ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!