ಹಿಜಾಬ್ ವಿಚಾರದಲ್ಲಿ ರಾಜ್ಯದ ಮರ್ಯಾದೆ ಹಾಳು ಮಾಡುತ್ತಿದ್ದಾರೆ: ಆಂದೋಲಾ ಶ್ರೀ ಕಿಡಿ

ಹೊಸದಿಗಂತ ವರದಿ, ಕಲಬುರಗಿ:

ರಾಜ್ಯದ ಮುಸ್ಲಿಮರು ಮತ್ತು ಪೊಲೀಸರು ಹಿಜಾಬ್ ವಿಚಾರದಲ್ಲಿ ರಾಜ್ಯದ ಮರ್ಯಾದೆ ತೆಗೆಯುತ್ತಿದ್ದಾರೆ ಎಂದು ಜೇವರ್ಗಿಆಂದೋಲಾ ಕರುಣೇಶ್ವರ ಮಠದ ಹಾಗೂ ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದ್ದಾರೆ.
ಅವರು ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಸ್ಲಿಂ ವಿದ್ಯಾರ್ಥಿಗಳು ಈಗಲೂ ಸಹ ಹಿಜಾಬ್ ಧರಿಸಿಯೇ ಶಾಲೆಗೆ ಆಗಮಿಸುತ್ತಿದ್ದಾರೆ. ಇವರನ್ನು ತಡೆಯುವ ತಾಕತ್ತು ಪೋಲಿಸರಿಗೆ ಇಲ್ಲವೆ? ಎಂದು ಹರಿಹಾಯ್ದರು.
ನ್ಯಾಯಾಲಯ ಮತ್ತು ನಮ್ಮ ಸಂಘಟನೆಯ ಹಿರಿಯರ ಮಾತಿಗೆ ನಾವು ಬದ್ದರಾಗಿದ್ದೆವೆ. ಆದರೆ ಇವರು ಮಾತ್ರ ಈಗಲೂ ಸಹ ಹಿಜಾಬ್ ಹಾಕಿಕೊಂಡೆ ಶಾಲಾ-ಕಾಲೇಜಿಗೆ ಆಗಮಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿದವರಿಗೆ ಒದ್ದು ಹೊರ ಹಾಕಬೇಕೆಂದರು.
ಹಿಜಾಬ್ ತಂಟೆಗೆ ಬಂದರೆ ಬಸವನಗೌಡ ಪಾಟೀಲ್ ಯತ್ನಾಳ ಮತ್ತು ಆಂದೋಲಾ ಸ್ವಾಮೀಗೆ ತುಂಡು ತುಂಡು ಮಾಡಿ ಕತ್ತರಿಸುತ್ತೇನೆ ಎಂಬ ಕಾಂಗ್ರೆಸ್ ಮುಖಂಡ ಮುಕ್ರಂಖಾನ ಹೇಳಿಕೆ ಉತ್ತರ ನೀಡಿದ ಅವರು, ನಾನು ನಾಳೆ ಸೇಡಂಗೆ ಬರುತ್ತಿದ್ದೇನೆ. ತಾಕತ್ತು ಇದ್ದರೆ ನನ್ನನ್ನು ತುಂಡು ತುಂಡು ಮಾಡಲಿ ನೋಡೋಣಾ ಎಂದು ಸವಾಲು ಹಾಕಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!