Thursday, September 29, 2022

Latest Posts

ಹಿಲ್ ಹಾಫ್ ಮ್ಯಾರಥಾನ್: ಓಟದ ಮಧ್ಯೆಯೇ ಹೃದಯಾಘಾತದಿಂದ ರಾಷ್ಟ್ರೀಯ ಟೇಬಲ್ ಟೆನ್ನಿಸ್ ಆಟಗಾರ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾರಾಷ್ಟ್ರದಲ್ಲಿ ಮ್ಯಾರಥಾನ್​ನಲ್ಲಿ ಪಾಲ್ಗೊಂಡಿದ್ದ ರಾಷ್ಟ್ರೀಯ ಟೇಬಲ್ ಟೆನಿಸ್ ಆಟಗಾರ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಡೆದಿದೆ. ಕೊಲ್ಲಾಪುರದ ರಾಜ್ ಪಟೇಲ್ (32) ಎಂಬುವವರೇ ಮೃತ ಆಟಗಾರ.
ಸತಾರಾ ಜಿಲ್ಲೆಯಲ್ಲಿ ನಡೆದ 11ನೇ ಹಿಲ್ ಹಾಫ್ ಮ್ಯಾರಥಾನ್​ನಲ್ಲಿ ದೇಶ ಹಾಗೂ ವಿದೇಶಗಳಿಂದ ಏಳು ಸಾವಿರ ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ ಕೊಲ್ಲಾಪುರದ ರಾಜ್ ಪಟೇಲ್ ಕೂಡ ಒಬ್ಬರು. ಆದರೆ, ಮ್ಯಾರಥಾನ್ ಓಟದ ಮಧ್ಯೆಯೇ ರಾಜ್​ ಪಟೇಲ್​ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ರಾಜ್​ ಪಟೇಲ್ ​ಮೃತದೇಹವನ್ನು ಸತಾರಾ ಸರ್ಕಾರಿ ಆಸ್ಪತ್ರೆಗೆ ಮೃತ ಸಾಗಿಸಿದ್ದು, ಇಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!