ಭೂಕುಸಿತ, ಪ್ರವಾಹಕ್ಕೆ ತತ್ತರಿಸಿದ ಹಿಮಾಚಲ ಪ್ರದೇಶ: 61 ಜನರು ಸಾವು, 10 ಸಾವಿರ ಕೋಟಿ ರೂ. ಗೂ ಅಧಿಕ ನಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭೂಕುಸಿತಗಳು ಮತ್ತು ಪ್ರವಾಹದಿಂದಾಗಿ ಈ ವಾರದಲ್ಲಿ ಹಿಮಾಚಲ ಪ್ರದೇಶದಲ್ಲಿ ಕನಿಷ್ಠ 61 ಜನರು ಸಾವನ್ನಪ್ಪಿದ್ದು 10 ಸಾವಿರ ಕೋಟಿ ರೂ. ಗೂ ಅಧಿಕ ನಷ್ಟವಾಗಿದೆ.

ಈ ಬಾರಿಯ ಮಳೆಗೆ ಹಾನಿಗೊಳಗಾದ ಮೂಲಸೌಕರ್ಯಗಳನ್ನು ಪುನರ್ನಿರ್ಮಿಸಲು ಮತ್ತು ಆದ ಅಂದಾಜು ನಷ್ಟವನ್ನು ಭರಿಸಲು ತನ್ನ ರಾಜ್ಯವು ಒಂದು ವರ್ಷ ತೆಗೆದುಕೊಳ್ಳುತ್ತದೆ ಎಂದು ಮುಖ್ಯ ಸಚಿವ ಸುಖಿರ್ ಸಿಂಗ್ ಸುಖು ಹೇಳಿದ್ದಾರೆ. ಒಟ್ಟು ಸುಮಾರು 10 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

ಭಾನುವಾರದಿಂದ ರಾಜ್ಯ ರಾಜಧಾನಿ ಶಿಮ್ಲಾದ ಸಮ್ಮರ್ ಹಿಲ್, ಕೃಷ್ಣ ನಗರ್ ಮತ್ತು ಫಾಗ್ಲಿಯ ಭೂಕುಸಿತಗಳಲ್ಲಿ ಅನೇಕ ಜನರು ಸಾವನ್ನಪ್ಪಿದ್ದಾರೆ.

ಸಮ್ಮರ್ ಹಿಲ್‍ನಲ್ಲಿನ ಭಗ್ನಾವಶೇಷಗಳಿಂದ 13 ಶವಗಳನ್ನು ಮರುಪಡೆಯಲಾಗಿದ್ದು, ಐದು ಫಾಗ್ಲಿಯಿಂದ ಮತ್ತು ಕೃಷ್ಣ ನಗಾರ್ನಿಂದ ಎರಡು ಮೃತದೇಹಗಳು ಲಭಿಸಿವೆ..

ಕಳೆದ ಸಂಜೆ ಶಿಮ್ಲಾದ ಕೃಷ್ಣ ನಗರದಲ್ಲಿ ಎಂಟು ಮನೆಗಳ ಸುತ್ತಲೂ ಭೂಕುಸಿತ ಉಂಟಾಗಿದ್ದು ಇದರಿಂದಾಗಿ ಇಬ್ಬರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಲವಾರು ಇತರ ಮನೆಗಳನ್ನು ಖಾಲಿ ಮಾಡಲಾಗಿದೆ.ತಗ್ಗು ಪ್ರದೇಶಗಳಿಂದ 800ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದ್ದು ಸ್ಥಳಾಂತರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಇಂದು ಕಾಂಗ್ರಾ ಜಿಲ್ಲೆಯ ಮಳೆ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದ ಸುಖು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!