Sunday, December 4, 2022

Latest Posts

ಹಿಮಾಚಲ ಪ್ರದೇಶ: ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಸಾರಥ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಿಮಾಚಲ ಪ್ರದೇಶದಲ್ಲಿನ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಸಾರಥ್ಯ ವಹಿಸಲಿದ್ದಾರೆ.

ಪ್ರಸ್ತುತ ರಾಹುಲ್ ಗಾಂಧಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಕ್ಷ ಕೈಗೊಂಡಿರುವ ’ಭಾರತ್ ಜೋಡೊ ಯಾತ್ರೆ’ಯಲ್ಲಿ ಸಕ್ರೀಯವಾಗಿರುವ ಹಿನ್ನೆಲೆಯಲ್ಲಿ ಅವರು ಗುಡ್ಡಗಾಡು ರಾಜ್ಯ ಹಿಮಾಚಲದಲ್ಲಿ ಪಕ್ಷ ಸಂಘಟನೆ ನಡೆಸುವುದು ಕಷ್ಟವಾಗಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರದ ಜವಾಬ್ದಾರಿಯನ್ನು ಸಹೋದರಿ ಪ್ರಿಯಾಂಕಾ ಗಾಂಧಿ ಅವರ ಹೆಗಲಿಗೆ ವರ್ಗಾಯಿಸಿದ್ದಾರೆ.

ಅ.30ರಂದು ಹಿಮಾಚಲಪ್ರದೇಶ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಕೊನೆಯಾಗಲಿದ್ದು, ಮರು ದಿನವೇ ಪ್ರಿಯಾಂಕಾ ಗಾಂಧಿ, ಎಂಟು ರ್‍ಯಾಲಿ, ರೋಡ್ ಶೋಗಳಲ್ಲಿ ಭಾಗವಹಿಸಲಿದ್ದಾರೆ. ಅ.31ರಂದು ಮಂಡಿ ಮತ್ತು ಕಲ್ಲು, ನ.3ರಂದು ಕಾಂಗ್ರಾ ಮತ್ತು ಚಂಬಾ ಹಾಗೂ ನ.7ರಂದು ಹಮಿರ್‌ಪುರ್ ಮತ್ತು ಉನಾದಲ್ಲಿ ಪ್ರಚಾರ ಮಾಡಲಿದ್ದಾರೆ. ಹಾಗೆಯೇ ನ.12ರ ಚುನಾವಣೆಗೆ ಮುನ್ನ ಪ್ರಚಾರದ ಕೊನೆ ದಿನವಾದ ನ.10 ರಂದು ಶಿಮ್ಲಾ ಮತ್ತು ಸಿರ್ಮೌರ್‌ನಲ್ಲಿ ಪ್ರಿಯಾಂಕಾ ರ್‍ಯಾಲಿ ನಡೆಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!