ಹೆಂಡ್ತಿ ಜತೆ ಹೈಟ್​ ಮ್ಯಾಚ್​ ಮಾಡಲು ಕಷ್ಟಪಟ್ಟ ಹಿಮೇಶ್​ ರೇಷಮಿಯಾ: ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್!​

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಾಲಿವುಡ್ ಗಾಯಕ , ಸಂಗೀತ ನಿರ್ದೇಶಕ , ನಟ ಹಿಮೇಶ್ ರೇಷಮಿಯಾ ಸೋಶಿಯಲ್​ ಮೀಡಿಯಾದಲ್ಲಿ ಆಯಕ್ಟೀವ್​ ಆಗಿರುತ್ತಾರೆ. ಅನೇಕ ಫೋಟೋಗಳನ್ನು ಶೇರ್ ಮಾಡುತ್ತಾ ಹಾಡುಗಳನ್ನು ಹಾಡುತ್ತ ಅಭಿಮಾನಿಗಳಿಗೆ ಹತ್ತಿರವಾಗಿ ಇರುತ್ತಾರೆ. ಆದ್ರೆ ಇದೀಗ ಹಿಮೇಶ್ ಟ್ರೋಲರ್​ಗಳಿಗೆ ಅಚ್ಚುಮೆಚ್ಚು ಆಗಿದ್ದಾರೆ.
ಸೆಲೆಬ್ರಿಟಿಗಳು ಎಲ್ಲಿ ಹೋದರೂ ಕೂಡ ಅವರನ್ನು ಪಾಪರಾಜಿಗಳು ಹಿಂಬಾಲಿಸುತ್ತಾರೆ. ಅದೇ ರೀತಿ ಹಿಮೇಶ್ ಹಿಂದೆ ಬಿದ್ದ ಪಾಪರಾಜಿಗಳು ಕೆಲವು ಫೋಟೋಗಳನ್ನು ಕ್ಲಿಕ್ಕಿಸಿದ್ದು, ಇದೀಗ ಸಖತ್ ಟ್ರೋಲ್ ಆಗುತ್ತಿದ್ದಾರೆ .
ಇತ್ತೀಚೆಗೆ, ಹಿಮೇಶ್ ರೇಷಮಿಯಾ ಅವರು ಪತ್ನಿ ಸೋನಿಯಾ ಕಪೂರ್ ಜೊತೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು . ಇನ್ನು , ಹಿಮೇಶ್​ ಅವರಿಗಿಂತಲೂ ಸೋನಿಯಾ ಕಪೂರ್​ ಎತ್ತರ ಇದ್ದಾರೆ . ಇದಿರಂದ ಕೆಲವೊಮ್ಮೆ ಹಿಮೇಶ್​ಗೆ ಇರಿಸುಮುರಿಸು ಆಗಿದ್ದು, ಉಂಟು. ಈ ಬಾರಿ ಬಹಿರಂಗವಾಗಿ ಇದು ಕ್ಯಾಮೆರಾ ಮುಂದೆ ಸಾಬೀತಾಗಿದೆ .
ಕ್ಯಾಮೆರಾಗಳಿಗೆ ಹಿಮೇಶ್ ರೇಷಮಿಯಾ ಮತ್ತು ಅವರ ಪತ್ನಿ ಸೋನಿಯಾ ಕಪೂರ್ ವಿಮಾನ ನಿಲ್ದಾಣದಲ್ಲಿ ಜೊತೆಯಾಗಿ ಪೋಸ್ ಕೊಟ್ಟಿದ್ದಾರೆ . ಈ ವೇಳೆ ಪತ್ನಿಯ ಹೈಟ್ ಗೆ ಮ್ಯಾಚ್ ಮಾಡಲು ಹಿಮೇಶ್ ಅವರು ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ . ಅದು ವಿಡಿಯೋದಲ್ಲಿ ಸಹ ಕಾಣಿಸಿಕೊಂಡಿದೆ . ಫೋಟೋ ಕ್ಲಿಕ್ಕಿಸುವಾಗ ಹಿಮೇಶ್ ಅವರು ಎತ್ತರವಾಗಿ ಕಾಣಲು ತುದಿಗಾಲಿನಲ್ಲಿ ನಿಂತಿರುವುದು ಕ್ಯಾಮೆರಾ ಕಣ್ಣುಗಳಿಗೆ ಕಾಣಿಸಿದೆ .
ಸದ್ಯ , ಈ ವಿಡಿಯೋ ನೋಡಿದ ನೆಟ್ಟಿಗರು ಬಿದ್ದು ಬಿದ್ದು ನಗುತ್ತಿದ್ದು , ಟ್ರೋಲ್ ಮಾಡುವುದರ ಜತೆಗೆ ವಿಡಿಯೋವನ್ನು ಸಖತ್ ವೈರಲ್ ಮಾಡುತ್ತಿದ್ದಾರೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!