ಹೊಸದಿಗಂತ ಡಿಜಿಟಲ್ ಡೆಸ್ಕ್
ಅಲುಮಿನಿಯಂ ಮತ್ತು ತಾಮ್ರ ಉತ್ಪಾದನಾ ಕಂಪನಿ ಹಿಂಡಾಲ್ಕೊ ತನ್ನ ಅತಿದೊಡ್ಡ ಮೊದಲ ತ್ರೈಮಾಸಿಕ ಲಾಭವನ್ನು ಘೋಷಿಸಿದೆ. ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಹಿಂಡಾಲ್ಕೊದ ಲಾಭದಲ್ಲಿ ಶೇ. 48ರ ಏರಿಕೆ ಇದಾಗಿದ್ದು, ಜೂನ್ ತಿಂಗಳಿಗೆ ಮುಕ್ತಾಯಗೊಂಡ ತ್ರೈಮಾಸಿಕದಲ್ಲಿ ರು. 4,119 ಕೋಟಿ ರುಪಾಯಿಗಳ ಲಾಭ ಗಳಿಸಿದೆ ಹಿಂಡಾಲ್ಕೊ.
ಆದಿತ್ಯ ಬಿರ್ಲಾ ಸಮೂಹದ ಈ ಕಂಪನಿಯ ಆದಾಯ ಸಹ ವರ್ಷದ ಹಿಂದಿನ ಇದೇ ತ್ರೈಮಾಸಿಕದ ರು 41,358 ಕೋಟಿ ರುಪಾಯಿಗಳಿಗೆ ಹೋಲಿಸಿದರೆ, ಈ ಬಾರಿ ರು 58,018 ಕೋಟಿ ರುಪಾಯಿಗಳಿಗೆ ಏರಿದೆ.