ಕೊವ್ಯಾಕ್ಸಿನ್​, ಕೋವಿಶೀಲ್ಡ್, ​ಬೂಸ್ಟರ್​ ಡೋಸ್ ಜೊತೆಗೆ ಮತ್ತೊಂದು ವ್ಯಾಕ್ಸೀನ್ ಗೆ ಸಿಕ್ಕಿತು ಗ್ರೀನ್ ಸಿಗ್ನಲ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೇಶದಲ್ಲಿ ಕೊರೋನಾ ಏರಿಳಿತವಾಗುತ್ತಿದ್ದು, ಈ ಹಿನ್ನೆಲೆ ಅರೋಗ್ಯ ಇಲಾಖೆ ನಿಯಂತ್ರಣಕ್ಕಾಗಿ 2 ಡೋಸ್​ ಕೊವ್ಯಾಕ್ಸಿನ್​, ಕೋವಿಶೀಲ್ಡ್​ ಲಸಿಕೆ ಅಲ್ಲದೇ ಬೂಸ್ಟರ್​ ಡೋಸ್​ ಅನ್ನೂ ಉಚಿತವಾಗಿ ನೀಡುತ್ತಿದೆ. ಇದೀಗ ಇದರ ಜೊತೆಗೆ ಇದೀಗ 18 ವರ್ಷ ಮೇಲ್ಪಟ್ಟವರಿಗೆ ಬಯೋಲಾಜಿಕಲ್​ ಇ ಕಾರ್ಬೆವಾಕ್ಸ್​ ಲಸಿಕೆಯನ್ನು ಮುನ್ನೆಚ್ಚರಿಕಾ ಡೋಸ್​ ಆಗಿ ತೆಗೆದುಕೊಳ್ಳಲು ಅನುಮತಿ ನೀಡಿದೆ.

ಇಮ್ಯುನೈಸೇಶನ್‌ ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದಿಸಿದೆ.
ಕಾರ್ಬೆವಾಕ್ಸ್ ವೈವಿಧ್ಯಮಯ ಕೋವಿಡ್​ ಲಸಿಕೆಯಾಗಿರುವುದರಿಂದ ಈ ವಯೋಮಾನದವರಲ್ಲಿ ಹೆಚ್ಚಿನ ರೋಗ ನಿರೋಧಕತೆ ಉತ್ಪಾದಿಸಲು ಈ ಬೂಸ್ಟರ್​ ಡೋಸ್​ ನೆರವಾಗಲಿದೆ ಎಂದು ಹೇಳಲಾಗಿದೆ.

18 ವರ್ಷಕ್ಕಿಂತ ಮೇಲ್ಪಟ್ಟವರು ಕೊವ್ಯಾಕ್ಸಿನ್​ ಮತ್ತು ಕೋವಿಶೀಲ್ಡ್​ ಪಡೆದ 6 ತಿಂಗಳು ಅಥವಾ 26 ವಾರಗಳ ನಂತರ ಕಾರ್ಬೆವಾಕ್ಸ್ ಅನ್ನು ಮುನ್ನೆಚ್ಚರಿಕೆ ಡೋಸ್ ಆಗಿ ಹಾಕಿಸಿಕೊಳ್ಳಬಹುದು.

ಈಗಾಗಲೇ ನೀಡಲಾಗಿರುವ ಮಾರ್ಗಸೂಚಿಗಳ ಪ್ರಕಾರ ಕೊವ್ಯಾಕ್ಸಿನ್​ ಅಥವಾ ಕೋವಿಶೀಲ್ಡ್​ ಅನ್ನು ಬೂಸ್ಟರ್​ ಡೋಸ್​ ಆಗಿ ಪಡೆದುಕೊಳ್ಳಲು ಅನುಮತಿಸಲಾಗಿದೆ. ಇದೀಗ ಕಾರ್ಬೆವಾಕ್ಸ್​ ಡೋಸ್​ ಪಡೆದುಕೊಳ್ಳಲು ನೀಡಿದ ಅನುಮತಿ ನೀಡಲಾಗಿದೆ.
ಬಯೋಲಾಜಿಕಲ್​ ಲಸಿಕೆಯಾದ ಕಾರ್ಬೆವಾಕ್ಸ್​ ಅನ್ನು ಈ ಮೊದಲು 12-14 ವರ್ಷದ ವಯೋಮಾನದ ಮಕ್ಕಳಿಗೆ ಮಾತ್ರ ನೀಡಲು ಅನುಮೋದಿಸಲಾಗಿತ್ತು.

ಕೊವಾಕ್ಸಿನ್​ ಮತ್ತು ಕೋವಿಶೀಲ್ಡ್​ ಲಸಿಕೆಯ ಡೋಸ್​ ಪಡೆದ ವ್ಯಕ್ತಿಗಳ ಮೇಲೆ ನಡೆಸಲಾದ ಪ್ರಯೋಗದಲ್ಲಿ ಕಾರ್ಬೆವಾಕ್ಸ್​ ಬೂಸ್ಟರ್​ ಡೋಸ್​ ಉತ್ತಮ ಫಲಿತಾಂಶ ನೀಡಿದ್ದು, ಬೂಸ್ಟರ್​ ಡೋಸ್​ ಆಗಿ ಪಡೆದ ವ್ಯಕ್ತಿಗಳಲ್ಲಿ ಪ್ರತಿಕಾಯಗಳು ಗಮನಾರ್ಹವಾಗಿ ಹೆಚ್ಚಳ ಕಂಡಿವೆ. ಹೀಗಾಗಿ ಇದು ಸೋಂಕಿನ ವಿರುದ್ಧ ಇನ್ನಷ್ಟು ರಕ್ಷಣೆ ನೀಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡುಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!