ಹಿಂದಿ ಗಾಯಕ ಕೆಕೆ ನಿಧನ: ಕಂಬನಿ ಮಿಡಿದ ಅಭಿಮಾನಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಕೆಕೆ ಎಂದು ಜನಪ್ರಿಯರಾಗಿದ್ದ ಗಾಯಕ ಹಾಗೂ ಸಂಗೀತ ಸಂಯೋಜಕ ಕೃಷ್ಣಕುಮಾರ್‌ ಕುನ್ನತ್‌ ಮಂಗಳವಾರ ಕೋಲ್ಕತ್ತಾದಲ್ಲಿ ನಿಧನರಾಗಿದ್ದಾರೆ. 53 ವರ್ಷದವರಾಗಿದ್ದ ಅವರು ಎರಡು ದಿನಗಳ ಕಾನ್ಸರ್ಟ್‌ಗಾಗಿ ಕೋಲ್ಕತ್ತಾಗೆ ತೆರಳಿದ್ದರು. ನಜ್ರುಲ್‌ ಮಂಚ್‌ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಅನಾರೋಗ್ಯಕ್ಕೊಳಗಾಗಿದ್ದರು. ರಾತ್ರಿ 10ಗಂಟೆಯ ವೇಳೆ ಅವರನ್ನು ಆಸ್ಪತ್ರೆಗೆ ರವಾನಿಸಲಾಯಿತಾದರೂ ಅವರು ಆಗಲೇ ನಿಧನರಾಗಿದ್ದರು ಎನ್ನಲಾಗಿದೆ. ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಮೂಲಗಳು ವರದಿ ಮಾಡಿರುವ ಪ್ರಕಾರ ಸಂಗೀತ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುತ್ತಿದ್ದಾಗಲೇ ಕೆಕೆ ಅಸ್ವಸ್ಥಗೊಂಡಿದ್ದರು. ಮಧ್ಯಂತರದ ಬ್ರೆಕ್‌ ನಲ್ಲಿ ಅವರ ಅಸ್ವಸ್ಥತೆಯೆ ಬಗ್ಗೆ ಹೇಳಿದ್ದರೂ ಆದರೂ ಅದರ ನಡುವೆಯೇ ಅವರು ಕಾರ್ಯಕ್ರಮವನ್ನು ಪೂರ್ಣಗೊಳಿಸಿದರು. ನಂತರ ಅವರನ್ನು ಅವರನ್ನು ಎಸ್ಪ್ಲಾನೇಡ್‌ನಲ್ಲಿರುವ ಪಂಚತಾರಾ ಹೋಟೆಲ್‌ಗೆ ಕರೆದೊಯ್ಯಲಾಯಿತು, ಅಲ್ಲಿ ಅವರ ಆರೋಗ್ಯ ಹದಗೆಟ್ಟಿತು ಮತ್ತು ಅವರು ಆಸ್ಪತ್ರೆಗೆ ತಲುಪುವ ಮೊದಲೇ ಅವರು ನಿಧನರಾದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!