May 11, 2026
Monday, May 11, 2026
spot_img

ಬೆಳಗಾವಿಯ ಮೋದಗಾದಲ್ಲಿ ಹಿಂದು ಸಮಾವೇಶ: ಬೃಹತ್ ಬೈಕ್ ರ‍್ಯಾಲಿ

ಹೊಸ ದಿಗಂತ ವರದಿ, ಬೆಳಗಾವಿ :

ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ನೂರು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ, ಎಲ್ಲ ಕಡೆ ವಿರಾಟ್ ಹಿಂದು ಸಮಾವೇಶಗಳನ್ನು ಆಯೋಜಿಸಲಾಗಿದೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೋದಗಾ ಗ್ರಾಮದಲ್ಲಿ ಭಾನುವಾರ ಆಯೋಜಿಸಲಾಗಿರುವ ಹಿಂದು ಸಮ್ಮೇಳನದ ಅಂಗವಾಗಿ ಶನಿವಾರ ಬಾಳೇಕುಂದ್ರಿ ಕೆ.ಎಚ್ ಗ್ರಾಮದಿಂದ ಬೃಹತ್ ಬೈಕ್ ರ್ಯಾಲಿಗೆ ಭಾರತ ಮಾತೆಗೆ ಪೂಜೆ ಸಲ್ಲಿಸಿದ ಬಿಜೆಪಿ ಮುಖಂಡರುಗಳಾದ ಯುವರಾಜ್ ಜಾಧವ, ಧನಂಜಯ್ ಜಾದವ್ ಹಾಗೂ ಹಿಂದೂ ಮುಖಂಡರ ನೇತ್ರತ್ವದಲ್ಲಿ ರ್ಯಾಲಿಗೆ ಚಾಲನೆ ನೀಡಿದರು.

ರಾಷ್ಟ್ರೀಯ ಸ್ವಯಂ ಸಂಘಕ್ಕೆ ನೂರು ವರ್ಷ ಪೂರೈಕೆ ಪೂರೈಸಿರುವುದರಿಂದ ಅಖಂಡ ಹಿಂದು ರಾಷ್ಟ್ರ ನಿರ್ಮಾಣಕ್ಕೆ, ಎಲ್ಲ ಹಿಂದೂಗಳನ್ನು ಒಂದು ಕೂಡಿಸುವ ಕೆಲಸ ಎಲ್ಲ ಕಡೆಗೆ ಹಿಂದು ಸಮಾವೇಶಗಳನ್ನು ಮಾಡುವುದರ ಮೂಲಕ ಹಿಂದು ರಾಷ್ಟ್ರ ಜಾಗೃತಿ ಕಾರ್ಯವನ್ನು ಮಾಡಲಾಗುತ್ತಿದೆ.

ಪಂತ ಬಾಳೇಕುಂದ್ರಿಯ ದತ್ತ ಮಹಾರಾಜರ ಮಠದಕ್ಕೆ ಹಿಂದೂ ಸಮಾವೇಶದ ರ್ಯಾಲಿಯ ಭಾತರ ಮಾತೆಯ ಭಾವಚಿತ್ರಕ್ಕೆ ಆರತಿ ಬೆಳಗಿ ಪೂಜೆ ಸಲ್ಲಿಸಿ ಬರಮಾಡಿಕೊಂಡರು.
ಮೋದಗಾ ಗ್ರಾಮದಲ್ಲಿ ಹಿಂದು ಸಮ್ಮೇಳನದ ಆಯೋಜಿಸಿರುವ ಪೂರ್ವಭಾವಿಯಾಗಿ ಬೃಹತ್ ಬೈಕ್ ರ್ಯಾಲಿಯು, ಬಾಳೇಕುಂದ್ರಿ ಕೆ.ಎಚ್ ಗ್ರಾಮದಿಂದ ಪ್ರಾರಂಭವಾಗಿ, ಪಂತ ಬಾಳೇಕುಂದ್ರಿ ಹೊನ್ನಿಹಾಳ, ಮೋದಗಾ, ಸುಳೇಬಾವಿ, ಮಾರಿಹಾಳ, ಕಗಡಿಗುಡ್ಡಿ, ಕನಕಗಾವ ಅಷ್ಟೇ ಚಂದಗಡ ಮಾರ್ಗವಾಗಿ ತಲುಪಿದ ಬಳಿಕ ಮೋದಗಾ ಗ್ರಾಮದಲ್ಲಿ ಕೊನೆಗೊಂಡಿತು.

ಹಿಂದು ಸಮಾವೇಶದ ಆಯೋಜಕರುಗಳಾದ ಅಧ್ಯಕ್ಷರು ಸುರೇಶ ಬರಗಳಿ, ಗೌರವಾಧ್ಯಕ್ಷರು ದೇವನ್ನಾ ಬಂಗೆನ್ನವರ, ಮಾರುತಿ ಮುಗಳಿ, ಅಧಿವೇಪ್ಪ ನಾಗರಾಳಿ, ಲಕ್ಕಪ್ಪ ಕರಲಿಂಗನ್ನವರ, ಸುರೇಶ್ ಜಾಳೋಜಿ, ಚಂದ್ರಕಾಂತ ಕೆಂಗೇರಿ, ಸಿದ್ದಲಿಂಗಯ್ಯ ಸಾಲಿಮಠ, ಬಿಜೆಪಿ ಮುಖಂಡ ಹಾಗೂ ಹಿಂದು ಮುಖಂಡರುಗಳಾದ ಯುವರಾಜ್ ಜಾಧವ, ಧನಂಜಯ್ ಜಾಧವ, ಸೇರಿದಂತೆ ನೂರಾರು ಹಿಂದು ಕಾರ್ಯಕ್ರರ್ತರು ಭಾಗಿಯಾಗಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !