ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆ ತಿದ್ದುಪಡಿ: ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆಯ ಹೈಲೈಟ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಅಂತ್ಯವಾಗಿದೆ. 35 ವಿಷಯಗಳನ್ನು ಕ್ಯಾಬಿನೆಟ್​ನಲ್ಲಿ ಚರ್ಚಿಸಲಾಗಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಎಚ್​ಕೆ ಪಾಟೀಲ್​, ಹಿಂದೂ ಮ್ಯಾರೇಜ್ ಆ್ಯಕ್ಟ್ ಕಾಯ್ದೆ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದಿಸಿದೆ. ನೋಂದಣಿ ವಿವಾಹ ಸರಳೀಕರಣಕ್ಕೆ ರಾಜ್ಯ ಸರ್ಕಾರದ ಸಮ್ಮತಿ ನೀಡಿದ್ದು, ಹಿಂದೂ ವಿವಾಹ ನೊಂದಣಿ ಕಾಯ್ದೆ 2024ಕ್ಕೆ ಒಪ್ಪಿಗೆ ಸೂಚಿಸಿದೆ. ಕಚೇರಿಗಳಲ್ಲಿ ಮೊದಲು ವಿವಾಹ ನೊಂದಣಿ ಆಗುತ್ತಿದ್ದವು. ಈಗ ಆನ್ಲೈನ್ ಮೂಲಕ ನೊಂದಣಿಗೆ ಅವಕಾಶವಿದೆ. ಗ್ರಾಮ 1, ಕಾವೇರಿ 2, ಬಾಪೂಜಿ ಸೇವಾಕೇಂದ್ರಗಳಲ್ಲಿ ನೊಂದಣಿ ಮಾಡಬಹುದು. ಇನ್ಮೇಲೆ ಸಬ್ ರಿಜಿಸ್ಟರ್ ಕಚೇರಿಗೆ ಅಲೆಯುವಂತಿಲ್ಲ ಎಂದು ಹೇಳಿದ್ದಾರೆ.

ಸಿವಿಲ್ ಸೇವೆ ನೇಮಕಾತಿ ತಿದ್ದುಪಡಿಗೆ ಸಮ್ಮತಿ ನೀಡಲಾಗಿದೆ. ಕ್ರೀಡಾಪಟುಗಳಿಗೆ ನೇರನೇಮಕಾತಿಯಲ್ಲಿ ಅವಕಾಶ ನೀಡಲಾಗುತ್ತಿದೆ. ಶೇ.2% ಅವಕಾಶ ನೀಡಲು ಸಂಪುಟ ಸಮ್ಮತಿ ಸೂಚಿಸಲಾಗಿದೆ ಎಂದು ತಿಳಿಸಿದರು.

ಹಾಸನ ವೈದ್ಯಕೀಯ ಸಂಸ್ಥೆ ಆವರಣದಲ್ಲಿ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣಕ್ಕಾಗಿ 142 ಕೋಟಿ ಅನುದಾನ

ರಾಯಚೂರು ವಿವಿ ಆವರಣದಲ್ಲಿ ಅಧ್ಯಯನ ಸಂಸ್ಥೆಗೆ ಒಪ್ಪಿಗೆ ಸೂಚಿಸಲಾಗಿದೆ. ಜಿನೋಮ್ ಅಧ್ಯಯನ ಸಂಸ್ಥೆ ಪ್ರಾರಂಭಕ್ಕೆ ಅವಕಾಶ ನೀಡಲಾಗುತ್ತಿದೆ. 47.32 ಕೋಟಿ ವೆಚ್ಚಕ್ಕೆ ಸಂಪುಟ ಅನುಮೋದನೆ ನೀಡಲಾಗಿದೆ. ಡಿಎನ್ ಎ ಪರೀಕ್ಷಾ ಅಧ್ಯಯನ ಸಂಸ್ಥೆ ಇದು ಆಗಿದೆ ಎಂದರು.

ಕರ್ನಾಟಕ ಪಬ್ಲಿಕ್ ಶಾಲೆ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. 26.84 ಕೋಟಿ ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮಾಡಲಾಗುತ್ತಿದೆ. 9 ಕೋಟಿ ಕಲಿಕಾ ಕಾರ್ಯಕ್ರಮಕ್ಕೆ ಅನುದಾನ ನೀಡಲಾಗುತ್ತಿದೆ. 84 ಪಬ್ಲಿಕ್ ಶಾಲೆಗಳಿಗೆ 24 ಕೋಟಿ ವೆಚ್ಚಕ್ಕೆ ಒಪ್ಪಿಗೆ ನೀಡಲಾಗಿದೆ. ಕಲಿಕಾ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ವಿದ್ಯುತ್ ಚಿತಾಗಾರ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಲಾಗಿದೆ. 11 ಮಹಾನಗರ, 24 ನಗರಸಭೆಗಳಲ್ಲಿ ಚಿತಾಗಾರ ನಿರ್ಮಾಣಕ್ಕಾಗಿ 126 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಬೈಯ್ಯಪ್ಪನಹಳ್ಳಿಯಲ್ಲಿ ನಿರ್ಮಿಸಲಿರುವ ಮೇಲ್ಸೇತುವೆ ನಿರ್ಮಾಣಕ್ಕಾಗಿ ಒಟ್ಟು 263 ಕೋಟಿ ವೆಚ್ಚಕ್ಕೆ ಸಂಪುಟ ಸಮ್ಮತಿ ಸೂಚಿಸಲಾಗಿದೆ ಎಂದರು.

ಕೆರೆನೀರು ತುಂಬಿಸುವ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಬೆಳಗಾವಿ ತಾಲೂಕಿನ 20 ಕೆರೆಗಳಿಗೆ ನೀರು ಪೂರೈಕೆ. ಉಚ್ಚಂಗಾವ್,ಸಂತೆಬಸ್ತವಾಡ ಹೋಬಳಿಗೆ ಸೇರಿದ ಕೆರೆಗಳು. ಒಟ್ಟು 287 ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದೆ. ಹಿರೆಬಾಗೇವಾಡಿಯ 61 ಕೆರೆಗಳಿಗೆ ನೀರು ಪೂರೈಕೆ ಮಾಡಲು 519 ಕೋಟಿ ರೂ ಯೋಜನೆಗೆ ಒಪ್ಪಿಗೆ ನೀಡಿದೆ. 151 ಕೋಟಿ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಲಾಗಿದೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ ಬರುವ ಹಿರೇಬಾಗೇವಾಡಿ, ಘಟಪ್ರಭಾ ನದಿಯಿಂದ ಕೆರೆಗೆ ನೀರು ಪೂರೈಕೆ. ತುಂಗಭದ್ರಾ ನದಿಗೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ. ರಾಯಚೂರು ಜಿ.ಚಿಕ್ಕಮಂಚಾಲಿಯಲ್ಲಿ ನಿರ್ಮಾಣ. ಆಂಧ್ರದ ಅನುಮತಿ ಆಧಾರದ ಮೇಲೆ ನಿರ್ಮಾಣ. 158 ಕೋಟಿ ವೆಚ್ಚಕ್ಕೆ ಸೂಚಿಸಲಾಗಿದೆ ಎಂದರು.

ರಾಜ್ಯದ 6 ಜಿಲ್ಲೆಗಳಲ್ಲಿ ಶಿಥಲೀಕರಣ ಘಟಕ ನಿರ್ಮಾಣಕ್ಕಾಗಿ ಒಟ್ಟು 65 ಕೋಟಿ ವೆಚ್ಚಕ್ಕೆ ಸಂಪುಟದ ಒಪ್ಪಿಗೆ ನೀಡಿದೆ. ರಾಜೀವ್ ಆರೋಗ್ಯ ವಿವಿ ಪ್ರಾದೇಶಿಕ ಸಂಸ್ಥೆ ಪ್ರಾರಂಭ ಮಾಡಲಾಗುತ್ತಿದೆ. 49.80 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು ಎಂದರು.

ಕಲಬುರಗಿ, ಬೆಳಗಾವಿಯಲ್ಲಿ ಸುಟ್ಟಗಾಯದ ಆಸ್ಪತ್ರೆ ನಿರ್ಮಾಣ. ಎರಡು ವೈದ್ಯಕೀಯ ವಿವಿ ಆವರಣದಲ್ಲಿ ನಿರ್ಮಾಣ. ಇದಕ್ಕೆ 31.54 ಕೋಟಿ ನೀಡಲು ಒಪ್ಪಿಗೆ ನೀಡಲಾಗಿದೆ ಎಂದರು.

6 ಕೈಗಾರಿಕಾ ತರಬೇತಿ ಸಂಸ್ಥೆಗಳ ಉನ್ನತೀಕರಣ ಮಾಡಲಾಗುತ್ತಿದೆ. 100 ಕೋಟಿ ವೆಚ್ಚದಲ್ಲಿ ಉನ್ನತೀಕರಣ. ಅನುದಾನ ಬಿಡುಗಡೆಗೆ ಸಂಪುಟ ಸಮ್ಮತಿ

ಚಾಮರಾಜಪೇಟೆ ಬೃಹತ್ ಮಳೆ ನೀರು ಗಾಲುವೆ ನಿರ್ಮಾಣ. 30 ಕೋಟಿ ಹೆಚ್ಚುವರಿ ಅನುದಾನದಲ್ಲಿ ನಿರ್ಮಾಣ. 30 ಕೋಟಿ ಅನುದಾನ ಬಿಡುಗಡೆಗೆ ಒಪ್ಪಿಗೆ

ಬಿಬಿಎಂಪಿ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಮಾಡಲಾಗುತ್ತಿದೆ. 1200 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನಎಸ್ಸಿಪಿ, ಟಿಎಸ್ಪಿ ಅನುದಾನದಲ್ಲಿ ಅಭಿಯಾನಕ್ಕೆ 21.11 ಕೋಟಿ ವೆಚ್ಚ ಭರಿಸಲು ಒಪ್ಪಿಗೆ ನೀಡಿದೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಾಣ. 150 ಕೋಟಿ ಅಂದಾಜು‌ಮೊತ್ತಕ್ಕೆ ಒಪ್ಪಿಗೆ ನೀಡಿದೆ ಎಂದರು.

ಪೊಲೀಸ್ ಪ್ರಧಾನ ಕಚೇರಿಯ ವಾಹನಗಳಿಗೆ ತೈಲ ಪೂರೈಕೆ. ತೈಲ ಪೂರೈಸಲು ಅನುವಾಗುವಂತೆ ಪೆಟ್ರೋಕಾರ್ಡ್. ವಾರ್ಷಿಕ 171 ಕೋಟಿ ವೆಚ್ಚದಲ್ಲಿ ನೀಡಲು ಒಪ್ಪಿಗೆ

ನಂದಿ ವೈದ್ಯಕೀಯ ವಿಜ್ಙಾನ‌ಸಂಸ್ಥೆ ಆವರಣದಲ್ಲಿ ಕಟ್ಟಡ. ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ಅಸಮ್ಮತಿಸಲಾಗಿದೆ. 800 ಕೋಟಿ ವೆಚ್ಚದ ಕಟ್ಟಡ ನಿರ್ಮಾಣ. ತಾತ್ಕಾಲಿಕ ಅನುಮೋದನೆ ಕೈಬಿಡಲಾಗುತ್ತಿದೆ ಎಂದರು.

110 ಹಳ್ಳಿಗಳಿಗೆ ನೀರು ಪೂರೈಕೆ. ಬಿಬಿಎಂಪಿಗೆ ಸೇರ್ಪಡೆಯಾಗಿರುವ ಹಳ್ಳಿಗಳು. ಮೂಲಸೌಕರ್ಯಕ್ಕೆ ಅನುದಾನ ಬಿಡುಗಡೆ. ಸಹಕಾರಿ ಸಮೃದ್ಧ ಸೌಧ ನಿರ್ಮಾಣಕ್ಕೆ ಒಪ್ಪಿಗೆ. ಸಹಕಾರ ಸಂಘಗಳ ಮೂಲಕ ಸಾಲ ಸೌಲಭ್ಯ. ಸಾಲ ಪಡೆದ ರೈತರ ಸುಸ್ತಿ‌ಬಡ್ಡಿ ಮನ್ನಾ. ಮಧ್ಯಮಾವಧಿ, ಧೀರ್ಘಾವದಿ ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತದೆ. ಸರ್ಕಾರ ತೆಗೆದುಕೊಂಡಿದ್ದ ನಿರ್ಧಾರಕ್ಕೆ ಅನುಮೋದನೆ ನೀಡಲಾಗುತ್ತದೆ. 440 ಕೋಟಿ 20 ಲಕ್ಷ ಸುಸ್ತಿ ಬಡ್ಡಿ ಮನ್ನಾ. ಸಹಕಾರಿ ಸಂಘಗಳಿಂದ ಪಡೆದಿದ್ದ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ ಮಾಡಲಾಗುತ್ತಿದೆ. ಸರ್ಕಾರ ನಿರ್ಧಾರಕ್ಕೆ ಸಂಪುಟದ ಅನುಮೋದನೆ ನೀಡಿದೆ ಎಂದರು.

ನಾಮಫಲಕ ಕಡ್ಡಾಯ ಕನ್ನಡ ವಾಪಸ್ ವಿಚಾರವಾಗಿ ಮಾತನಾಡಿದಂತ ಅವರು, ತಾಂತ್ರಿಕ ಕಾರಣಗಳಿಂದ ವಾಪಸ್ ಆಗಿದೆ. ಇಲ್ಲದೆ ಹೋಗಿದ್ದರೆ ವಾಪಸ್ ಆಗ್ತಿರಲಿಲ್ಲ. ಅಧಿವೇಶನದಲ್ಲಿ ಪಾಸು ಮಾಡಿ ಕಳಿಸ್ತೇವೆ. ರಾಜಭವನದಲ್ಲಿ 6 ಬಿಲ್ ಗಳು ಪೆಂಡಿಂಗ್ ಇವೆ. ಅದಕ್ಕೆ‌ಕ್ಲಾರಿಫೈ ಕೇಳಿದ್ದರು. ಕೇಳಿದ್ದ ಮಾಹಿತಿಯನ್ನ ನಾವು ಒದಗಿಸಿದ್ದೇವೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!