ಇದು ನಿರಾಶಾದಾಯಕ, ಎಲೆಕ್ಷನ್ ಬಜೆಟ್: ಸಿಎಂ ಸಿದ್ಧರಾಮಯ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಮಧ್ಯಂತ ಬಜೆಟ್ ನಿರಾಶಾದಾಯಕ, ಎಲೆಕ್ಷನ್ ಬಜೆಟ್ ಆಗಿದೆ. ಅದರ ಹೊರತಾಗಿ ಬೇರೇನೂ ಇಲ್ಲ ಅಂತ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಇಂದು ಕೇಂದ್ರ ಬಜೆಟ್ ಕುರಿತಂತೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದೊಂದು ಬಹಳ ಚರ್ಚೆ ಮಾಡುವ ಬಜೆಟ್ ಅಲ್ಲ.ಒಟ್ಟಾರೆ ಕೇಂದ್ರ ಬಜೆಟ್ ನಿರಾಶಾದಾಯಕ ಬಜೆಟ್. ಎಲೆಕ್ಷನ್ ಬಜೆಟ್ ಎಂಬುದಾಗಿ ಹೇಳಿದರು.

2024-25ನೇ ವರ್ಷದ ಮಧ್ಯಂತರ ಬಜೆಟ್ ಮುಗಿಸಿದ್ದಾರೆ. ಚುನಾವಣೆ ಇರೋದರಿಂದ ಪೂರ್ಣ ಬಜೆಟ್ ಘೋಷಣೆ ಆಗದಿರಬಹುದು. ಇಂದು 4765768 ಕೋಟಿ ಗಾತ್ರದ ಬಜೆಟ್ ಮಂಡಿಸಲಾಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!