ರಾಮ ರಹೀಮರಂತೆ ರಂಜಾನ ಆಚರಿಸಿದ ಹಿಂದು- ಮುಸ್ಲಿಂಮರು

ಹೊಸದಿಗಂತ ವರದಿ ಚಿಕ್ಕೋಡಿ:

ದೇಶದೆಲ್ಲೆಡೆ ಹತ್ತು ಹಲವು ರೀತಿಯ ಧಾರ್ಮಿಕ ಸಂಘರ್ಷಗಳು ನಡೆಯುತ್ತಿವೆ ಆದರೆ, ಇಲ್ಲಿ ಹಿಂದು ಸಮುದಾಯದ ಕೆಲ ರೈತ ಮುಖಂಡರು ಹಾಗು ನಾಗರಿಕರು ಸೇರಿ ಮುಸ್ಲಿಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ಪರಸ್ಪರ ಕೇಸರಿ ಶಾಲು ಹಾಗು ಟೋಪಿ ಹಾಕಿ ರಾಮ – ರಹೀಮ ರಂತೆ ಆಚರಿಸುವ ಮೂಲಕ ನೈಜ ಭ್ರಾತೃತ್ವ ಮೆರೆದರು.

ಚಿಕ್ಕೋಡಿ ತಾಲೂಕಿನ ಕೆರೂರು ಗ್ರಾಮದಲ್ಲಿ ಈ ದೃಶ್ಯ ಕಂಡುಬಂದಿದ್ದು, ಗ್ರಾಮದಲ್ಲಿರುವ ದರ್ಗಾ ಮೈದಾನವು ಈ ಭಾವೈಕ್ಯ ಹಬ್ಬಕ್ಕೆ ಸಾಕ್ಷಿಯಾಯಿತು.‌ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಒಂದು ತಿಂಗಳ ನಿರಂತರ ಉಪವಾಸದ ನಂತರ ಇಂದು ಗ್ರಾಮದ ಹಿಂದು ರೈತ‌ ಮುಖಂಡರು ಹಾಗೂ ನಾಗರಿಕರು ಸೇರಿ ಪರಸ್ಪರ ಹಸ್ತಲಾಘವ ಮಾಡಿ ಪರಸ್ಪರ ಶುಭಕೋರಿ ಹಬ್ಬ ಭಾವೈಕ್ಯತೆಯಿಂದ ಆಚರಿಸಿದರು.

ಹಬ್ಬದಲ್ಲಿ ರೈತ‌ಮುಖಂಡ ಮಂಜುನಾಥ ಪರಗೌಡರ, ಪ್ರಮೋದ ಪಾಟೀಲ, ಸತ್ಯಪ್ಪಾ ದೇವಗೋಳ, ಬಾಬಾಸಾಬ ಮುಲ್ಲಾ, ಉಮರ ಹಪೀಜ, ಫಿರೋಜ ಮುಲ್ಲಾ ಸೇರಿ ನೂರಾರು ಮುಸ್ಲಿಂ ಸಮುದಾಯದವರು ಹಾಗು ಹಿಂದುಗಳು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!