ಹಿಂದು ಪದಕ್ಕೂ ಸದ್ಯ ಬಿಜೆಪಿಗೂ ಸಂಬಂಧವಿಲ್ಲ: ಪ್ಯಾರಿಸ್ ನಲ್ಲಿ ರಾಹುಲ್ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತದಲ್ಲಿ ಜಿ20 ಶೃಂಗಸಭೆ ಯಶಸ್ಸಿಯಾಗಿದ್ದು, ಅತ್ತ ಪ್ಯಾರಿಸ್ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಭಗವದ್ಗೀತಾ, ಉಪನಿಶತ್ ಸೇರಿದಂತೆ ಹಲವು ಪುಸ್ತಕದಲ್ಲಿ ಹೇಳಿರುವ ಹಿಂದು ಪದಕ್ಕೂ ಸದ್ಯ ಬಿಜೆಪಿ ವಕಾಲತ್ತು ವಹಿಸಿರುವ ಹಿಂದುತ್ವಕ್ಕೆ ಸಂಬಂಧವಿಲ್ಲ. ದುರ್ಬಲರ ಮೇಲೆ ದಾಳಿಗೆ ಯಾವುದೇ ಪುಸ್ತಕದಲ್ಲಿ ಹೇಳಿಲ್ಲ. ಬಿಜೆಪಿ ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಲು ಹೇಸುವುದಿಲ್ಲ ಎಂದು ಹೇಳಿದ್ದಾರೆ.

ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ದೇಶದಲ್ಲಿ ವಿವಾದ ಹಾಗೂ ಚರ್ಚೆಗೆ ಗ್ರಾಸವಾಗಿರುವ ಸನತಾನ ಹಾಗೂ ಹಿಂದುತ್ವದ ವಿರುದ್ಧ ವಾಗ್ದಾಳಿನಡೆಸಿದ್ದಾರೆ. ಬಿಜೆಪಿ ಆಡಳಿತದಲ್ಲಿ ನಾಗರೀಕರ ಸಮಾಜ ಭಯದಲ್ಲಿ ಬದುಕವಂತಾಗಿದೆ . ನಾವು ಪ್ರಜಾಪ್ರಭುತ್ವ ಉಳಿಸಲು ಹೋರಾಟ ನಡೆಸುತ್ತಿದ್ದೇವೆ ಎಂದಿದ್ದಾರೆ.

ಇಂಡಿಯಾ ಹೆಸರಿನ ಬದಲು ಭಾರತ್ ಹೆಸರು ಬಳಕೆ ಮಾಡಿರುವು ಕುರಿತು ಮಾತನಾಡಿದ ರಾಹುಲ್ , ವಿಪಕ್ಷಗಳ ಒಕ್ಕೂಟ ಇಂಡಿಯಾ ಅನ್ನೋ ಹೆಸರಿಟ್ಟಿದೆ. ಇದರಿಂದ ಪ್ರಧಾನಿ ಮೋದಿ ಇಂಡಿಯಾ ಹೆಸರನ್ನು ದ್ವೇಷಿಸುತ್ತಿದ್ದಾರೆ. ಇದೇ ಕಾರಣಕ್ಕೆ ಭಾರತ್ ಎಂದು ಹೆಸರು ಬದಲಾಯಿಸುವ ಪ್ರಯತ್ನದಲ್ಲಿದ್ದಾರೆ ಎಂದು ಹೇಳಿದ್ದಾರೆ.

ಆದ್ರೆ ಈ ಎರಡೂ ಹೆಸರು ಸಂವಿಧಾನದಲ್ಲಿದೆ. ಆದರೆ ಮೋದಿಗೆ ವಿಪಕ್ಷಗಳು ಇಂಡಿಯಾ ಹೆಸರಿಟ್ಟ ಕಾರಣ ಇಂಡಿಯಾ ಹೆಸರನ್ನೇ ದ್ವೇಷಿಸಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಜಿ20 ಶೃಂಗಸಭೆ ವೇಳೆ ಕೇಂದ್ರ ಸರ್ಕಾರ ನಡೆದುಕೊಂಡ ರೀತಿ ವಿರುದ್ದವೂ ರಾಹುಲ್ ಗಾಂಧಿ ಅಸಮಾಧಾನ ಹೊರಹಾಕಿದ್ದಾರೆ. ಭಾರತ ಸರ್ಕಾರ ಜಿ20 ಅತಿಥಿಗಳಿಂದ ನಮ್ಮ ದೇಶದ ಬಡ ಜನರನ್ನು ಮರೆ ಮಾಚುತ್ತಿದೆ ಎಂದು ಟೀಕಿಸಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!